ಬಾಯ್​ಫ್ರೆಂಡ್​ ಬಗ್ಗೆ ಮಾತನಾಡದ ತಾಪ್ಸಿ, ಈಗ ಬಾಯ್​ಫ್ರೆಂಡ್​ ಜತೆಗೇ ಸಿಕ್ಕಿಬಿದ್ದಿದ್ದಾರೆ!

Tapsi
Published on

ಸಿನಿಮಾ ಇಂಡಸ್ಟ್ರಿಯಲ್ಲಿ ವದಂತಿಗಳು ಸಹಜ. ಅದರಲ್ಲೂ ಪ್ರೀತಿ ಪ್ರೇಮದ ವಿಚಾರವಂತೂ ಕಾಳ್ಗಿಚ್ಚಿನಂತೆ ಸದ್ದು ಮಾಡುತ್ತದೆ. ಅದೇ ರೀತಿ ನಟಿ ತಾಪ್ಸೀ ಪನ್ನು ವಿಚಾರದಲ್ಲೂ ಇದೀಗ ಮುಂದುವರಿದಿದೆ. ಮಾಲ್ಡಿವ್ಸ್​ನಲ್ಲಿ ಹಾಲಿಡೇ ಟ್ರಿಪ್​ನಲ್ಲಿರುವ ತಾಪ್ಸೀ ಪನ್ನು, ಬಾಯ್​ಫ್ರೆಂಡ್​ ಜತೆ ಸಿಕ್ಕಿಬಿದ್ದಿದ್ದಾರೆ!

ಈ ಹಿಂದೆ ಬಾಯ್​ಫ್ರೆಂಡ್​ ಇರುವ ಬಗ್ಗೆಯಾಗಲಿ, ಆ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆಗೊಂದು ಈಗೊಂದು ವದಂತಿ ಕೇಳಿಬಂದಿತ್ತಾದರೂ, ನಂಬಲಾರ್ಹ ಸಾಕ್ಷಿ ಸಿಕ್ಕಿರಲಿಲ್ಲ. ಇದೀಗ ಪ್ರಿಯಕರನೊಟ್ಟಿಗೆ ಸ್ಟೇಪ್​ ಹಾಕುತ್ತಿರುವ ಭಂಗಿಯಲ್ಲಿ ಇಬ್ಬರೂ ಒಂದೇ ಫೋಟೋದಲ್ಲಿ ಸಿಕ್ಕಿದ್ದಾರೆ. ಆ ಫೋಟೋ ಸದ್ಯ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಹಾಗಾದರೆ ತಾಪ್ಸೀ ಪನ್ನು ಬಾಯ್​ಫ್ರೆಂಡ್​ ಯಾರು? ಡೆನ್ಮಾರ್ಕ್​ ಮೂಲದ ಬ್ಯಾಡ್ಮಿಂಟನ್​ ಆಟಗಾರ ಮಾಥಿಯಾಸ್ ಬೊಯ್​ ಜತೆಗೆ ಮಾಲ್ಡಿವ್ಸ್ ಟ್ರಿಪ್​ನಲ್ಲಿ ತಾಪ್ಸೀ ಕಾಲ ಕಳೆಯುತ್ತಿದ್ದಾರೆ. ಕಳೆದೊಂದು ವಾರದಿಂದ ಸ್ನೇಹಿತರೊಟ್ಟಿಗೆ ರಜೆ ದಿನಗಳನ್ನು ಕಳೆಯುತ್ತಿರುವ ಅವರು, ಮಾಥಿಯಾಸ್​ ಜತೆಗಿನ ಒಂದೇ ಒಂದು ಫೋಟೋ ಸಹ ಶೇರ್​ ಮಾಡಿಲ್ಲ. ಬದಲಿಗೆ ಮಾಥಿಯಾಸ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಾಪ್ಸೀ ಜತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net