ಹೈದರಾಬಾದ್: ಬಾಹುಬಲಿ, ಆರ್ಆರ್ಆರ್ನಂತಹ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ನೀಡಿದ ಟ್ಯಾಲೆಂಟೆಡ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಮತ್ತು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬೊದಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವುದು ಗೊತ್ತೆ ಇದೆ. SSMB29 ಶೀರ್ಷಿಕೆಯಲ್ಲಿ ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಮಹೇಶ್-ರಾಜಮೌಳಿ ಅವರ ಕಾಂಬೊದ ಮೊದಲ ಸಿನಿಮಾವಾದ್ದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್(Prithviraj Sukumaran) ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳೂ ಇವೆ.
ಆದರೆ ರಾಜಮೌಳಿ ಅವರ ಈ ಸಿನಿಮಾದ ಬಗ್ಗೆ ಕೇಳಿದಾಗಲೆಲ್ಲಾ ಪೃಥ್ವಿರಾಜ್ ಈ ವಿಷಯವನ್ನು ತಪ್ಪಿಸುತ್ತಿದ್ದರು. ಇತ್ತೀಚೆಗೆ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದು ವದಂತಿಗೆ ಪುಷ್ಠಿ ನೀಡಿದಂತಿತ್ತು. ಸದ್ಯ ನಟ ಪೃಥ್ವಿರಾಜ್ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಎಲ್ 2 ಎಂಪುರಾನ್ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಇತ್ತೀಚಿನ ಚಿತ್ರ. ಈ ಚಿತ್ರವು ಬ್ಲಾಕ್‌ಬಸ್ಟರ್ ಚಿತ್ರ ಲೂಸಿಫರ್‌ನ ಮುಂದುವರಿದ ಭಾಗವಾಗಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಂಜು ವಾರಿಯರ್ ಮತ್ತು ಟೋವಿನೋ ಥಾಮಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 27ರಂದು ತೆರೆಗೆ ಬರಲಿದೆ. ಈ ಸಿನಿಮಾದ ಸರಣಿ ಪ್ರಚಾರದಲ್ಲಿ ತೊಡಗಿರುವ ಪೃಥ್ವಿರಾಜ್ ರಾಜಮೌಳಿ ಅವರ ಎಸ್ಎಸ್ಎಮ್ಬಿ29 ಸಿನಿಮಾ ಕುರಿತು ಪ್ರತಿಕ್ರಿಯಿಸಿದ್ದಾರೆ.
ರಾಜಮೌಳಿ ಅವರ ಸಿನಿಮಾವೊಂದರ ಸೋರಿಕೆಯಾದ ವಿಡಿಯೋಗೆ ಪೃಥ್ವಿರಾಜ್ ಪ್ರತಿಕ್ರಿಯಿಸುತ್ತಾ, ಪ್ರೇಕ್ಷಕರು ಸೋರಿಕೆಯಾದ ವಿಡಿಯೋಗಳನ್ನು ನೋಡಲು ಏಕೆ ಆಸಕ್ತಿ ಹೊಂದಿದ್ದಾರೆಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದರ ವಿಶೇಷತೆ ಏನು? ಹಾಗೆ ನೋಡಿದರೆ ಸಿನಿಮಾದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ದೊಡ್ಡ ಪರದೆಯ ಮೇಲೆ ಆ ದೃಶ್ಯಗಳನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಎಸ್.ಎಸ್. ರಾಜಮೌಳಿ ಅವರ ಚಿತ್ರ ಪ್ರಸ್ತುತ ಚಿತ್ರೀಕರಣ ಹಂತದಲ್ಲಿದೆ. ಇದರ ಬಗ್ಗೆ ನಾನು ಈಗ ಏನೂ ಹೇಳಲಾರೆ. ಈ ಯೋಜನೆಯ ಬಗ್ಗೆ ತಂಡದಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸೋಣ. ನಾನು ಕಳೆದ ವರ್ಷದಿಂದ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅಂದಿನಿಂದ ನಾವು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದ ಹೇಳಿದ್ದಾರೆ. (ಏಜೆನ್ಸೀಸ್)
SSMB29 | ನಿರ್ದೇಶಕ ರಾಜಮೌಳಿಯ ಹೊಸ ಪೋಸ್ಟ್; ಮಹೇಶ್ ಬಾಬು & ಪ್ರಿಯಾಂಕಾ ಚೋಪ್ರಾ ರಿಯಾಕ್ಷನ್ ಹೀಗಿದೆ..