ಈ ಸಿನಿಮಾದಿಂದ ನಟ ಅಕ್ಷಯ್​ ಕುಮಾರ್​ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ; ಕಾರಣ ರಿವೀಲ್​ ಮಾಡಿದ ನಟ ಪೃಥ್ವಿರಾಜ್ ಸುಕುಮಾರನ್ | Akshay Kumar

blank

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್(Akshay Kumar) ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದವು. ಪ್ರೇಕ್ಷಕರು ನಟನನ್ನು ನೋಡಲು ಇಷ್ಟಪಡುತ್ತಿದ್ದರು. ನಂತರ ಅಕ್ಷಯ್ ಅವರ ಅನೇಕ ಚಿತ್ರಗಳು ಸೋಲನ್ನು ಕಾಣತೊಡಗಿದವು. ಆ ಫ್ಲಾಪ್ ಚಿತ್ರಗಳಲ್ಲಿ ‘ಸೆಲ್ಫಿ’ ಕೂಡ ಒಂದು.

ಇದನ್ನು ಓದಿ: ‘ಟಾಕ್ಸಿಕ್​’ ಬಿಡುಗಡೆ ದಿನಾಂಕ ಘೋಷಣೆ; ಹೊಸ ಪೋಸ್ಟರ್​​ ರಿಲೀಸ್​​.. ಚಿತ್ರತಂಡ ಹೇಳಿದಿಷ್ಟು | Toxic

2023ರಲ್ಲಿ ಬಿಡುಗಡೆಯಾದ ಸೆಲ್ಫಿ ಚಿತ್ರದ ಬಗ್ಗೆ ಅಕ್ಷಯ್ ಕುಮಾರ್ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. 2022 ರಲ್ಲಿ ಅವರ ಯಾವುದೇ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್​ ಕಾಣಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಚಿತ್ರ ಹಿಟ್ ಆಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅಕ್ಷಯ್​ ನಿರೀಕ್ಷೆ ಹುಸಿಯಾಯಿತು. ಸಕ್ಸಸ್​ ಕಾಣದ ಕಾರಣಕ್ಕೆ ಈ ಸಿನಿಮಾದಿಂದ ಒಂದು ರೂಪಾಯಿಯನ್ನು ಅಕ್ಷಯ್​ ಕುಮಾರ್​ ಪಡೆದಿಲ್ಲ ಎಂಬುದು ಇತ್ತೀಚೆಗೆ ಬಹಿರಂಗವಾಗಿದೆ.

ಹೌದು ಇತ್ತೀಚಿನ ಸಂದರ್ಶನವೊಂದರಲ್ಲಿ ಸೆಲ್ಫಿ ಚಿತ್ರದ ನಿರ್ಮಾಪಕ ಮತ್ತು ನಟ ಪೃಥ್ವಿರಾಜ್ ಸುಕುಮಾರನ್ ಅವರು ಅಕ್ಷಯ್ ಕುಮಾರ್ ಸೆಲ್ಫಿ ಚಿತ್ರಕ್ಕಾಗಿ ಒಂದು ಪೈಸೆಯನ್ನೂ ಪಡೆದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅದಕ್ಕೆ ಕಾರಣವನ್ನು ವಿವರಿಸಿದ್ದಾರೆ.
ನಾನು ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡಿದ್ದೇನೆ. ಆ ಸಿನಿಮಾದಿಂದ ಅವರು ಒಂದೇ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲಿಲ್ಲ.

ಸಿನಿಮಾ ಹಣ ಗಳಿಸಿದರೆ ಮಾತ್ರ ನಾನು ನನ್ನ ಸಂಭಾವನೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ಚಿತ್ರ ಚೆನ್ನಾಗಿ ಬರಲಿಲ್ಲ ಬಳಿಕ ಆ ಸಿನಿಮಾದಿಂದ ಅವರು ಯಾವುದೇ ಹಣವನ್ನು ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದರು. ಅಕ್ಷಯ್ ಕುಮಾರ್ ಕಳೆದ ಮೂರು ವರ್ಷಗಳಿಂದ ಹಿಟ್​ಗಾಗಿ ಹಂಬಲಿಸುತ್ತಿದ್ದಾರೆ. ಒಎಂಜಿ 2 ಹೊರತುಪಡಿಸಿ, ಅಕ್ಷಯ್ ಅವರ ಎಲ್ಲಾ ಚಿತ್ರಗಳು ವಿಫಲವಾಗಿವೆ. ಆದರೆ ಅವರ ಮುಂಬರುವ ಸಿನಿಮಾಗಳಾದ ವೆಲ್ಕಮ್ ಟು ದಿ ಜಂಗಲ್, ಹೌಸ್‌ಫುಲ್ 5, ಜಾಲಿ ಎಲ್‌ಎಲ್‌ಬಿ 3, ಕೇಸರಿ 2, ಭೂತ್ ಬಂಗಲೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.(ಏಜೆನ್ಸೀಸ್​​)

ನೆಗೆಟಿವ್​ ಟ್ರೋಲ್​​ಗೆ ಒಳಗಾಗಿದ್ದೆ.. ಹಿಂದಿನ ಕಾರಣ ತಿಳಿದು ಆಘಾತವಾಯ್ತು; ಅಸಲಿ ಸತ್ಯ ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ | Pooja Hegde

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…