ನೆಗೆಟಿವ್​ ಟ್ರೋಲ್​​ಗೆ ಒಳಗಾಗಿದ್ದೆ.. ಹಿಂದಿನ ಕಾರಣ ತಿಳಿದು ಆಘಾತವಾಯ್ತು; ಅಸಲಿ ಸತ್ಯ ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ | Pooja Hegde

blank

ಮುಂಬೈ: ಟಾಲಿವುಡ್​ ಟಾಪ್​ ನಾಯಕ ನಟರ ಜತೆ ತೆರೆ ಹಂಚಿಕೊಂಡ ನಟಿ ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಗೆ ಹೆಸರುವಾಸಿ. ಸದ್ಯ ಬಾಲಿವುಡ್​ನಲ್ಲಿ ಸಿನಿಮಾಗಳಲ್ಲಿ ಬಿಜಿಯಿರುವ ನಟಿ ಪೂಜಾ ಹೆಗ್ಡೆ(Pooja Hegde) ಇತ್ತೀಚೆಗೆ ನಕಾರಾತ್ಮಕ ಟ್ರೋಲ್​ ಕುರಿತು ಕೆಲವು ಸತ್ಯಾಂಶವನ್ನು ಬಹಿರಂಗ ಪಡಿಸಿದ್ದಾರೆ. ಜತೆಗೆ ಅದರಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ

ಇದನ್ನು ಓದಿ: ಪೃಥ್ವಿರಾಜ್ ಸುಕುಮಾರನ್ ‘SSMB29’ ಸಿನಿಮಾದ ಭಾಗವಾಗಿದ್ದಾರೆಯೇ?; ವದಂತಿಗೆ ಬ್ರೇಕ್​ ಹಾಕಿದ ನಟ | Prithviraj Sukumaran

ಬಣ್ಣದ ಲೋಕದ ಜನರು ಬೇರೆಯವರಿಗೆ ಮಸಿ ಬಳಿಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಯಾರನ್ನೂ ಹೆಸರಿಸಿದೆ, ಈ ನಕಾರಾತ್ಮಕ ಪಿಆರ್ ಆಟ ತನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಕಾರಾತ್ಮಕ ಪಿಆರ್ ಕುರಿತು ಮಾತನಾಡಿರುವ ನಟಿ, ತನ್ನನ್ನು ಹಲವು ಬಾರಿ ಟ್ರೋಲ್ ಮಾಡಲಾಗಿದೆ ಎಂದು ಹೇಳಿದರು.

ನನ್ನ ಫೋಟೋಗಳಿಂದ ಮೀಮ್ಸ್ ಮಾಡಲಾಗಿದೆ. ಹಲವು ಬಾರಿ (ಟ್ರೋಲ್ ಮಾಡಲಾಗಿದೆ), ನಿಜವಾಗಿಯೂ ಕೆಟ್ಟದ್ದನ್ನು ಮಾಡುವ ಒಂದು ವಿಷಯವೆಂದರೆ ಮೀಮ್ಸ್​ ಮಾಡಿ ಟ್ರೋಲ್​ ಮಾಡುವುದು. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದ ಸಮಯವಿತ್ತು ಎಂದು ನನಗೆ ನೆನಪಿದೆ. ಅವರು ನನ್ನ ಬಗ್ಗೆ ನಿರಂತರವಾಗಿ ನಕಾರಾತ್ಮಕ ವಿಷಯಗಳನ್ನು ಏಕೆ ಹೇಳುತ್ತಿದ್ದಾರೆ ಎಂದು ನಾನು ಯೋಚಿಸುತ್ತಿದ್ದೆ?. ನನ್ನನ್ನು ಟಾರ್ಗೆಟ್​ ಮಾಡಿಲಾಗಿದೆ ಎಂದು ಭಾಸವಾಯಿತು. ಆದರೆ ಜನರು ಇತರರನ್ನು ಕೆಳಗಿಳಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದು ನನಗೆ ಆಗ ತಿಳಿಯಿತು ಎಂದಿದ್ದಾರೆ.

ನಕಾರಾತ್ಮಕ ಪಿಆರ್ ತನ್ನ ಮತ್ತು ತನ್ನ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ವಿಷಯ ತಿಳಿದಾಗ ನಾನು ಮತ್ತು ನನ್ನ ಹೆತ್ತವರು ತುಂಬಾ ಅಸಮಾಧಾನಗೊಂಡೆವು. ಆದರೆ ನಾನು ಅದನ್ನು ಹೊಗಳಿಕೆಯಾಗಿಯೂ ಸ್ವೀಕರಿಸಿದೆ. ಏಕೆಂದರೆ ಯಾರಾದರೂ ನಿಮ್ಮನ್ನು ಕೀಳಾಗಿ ನೋಡಬೇಕೆಂದು ಭಾವಿಸಿದರೆ, ನೀವು ಅವರಿಗಿಂತ ಮೇಲಿದ್ದೀರಿ ಎಂದರ್ಥ. ಎಲ್ಲವೂ ಚೆನ್ನಾಗಿದೆ ಎಂದು ನಾನು ನನ್ನ ಹೆತ್ತವರಿಗೆ ಭರವಸೆ ನೀಡುತ್ತಲೇ ಇದ್ದೆ. ಆದರೆ ಒಂದು ಹಂತದ ನಂತರ ಅದು ತುಂಬಾ ಹೆಚ್ಚಾಯಿತು. ಜನರು ನನ್ನನ್ನು ಟ್ರೋಲ್ ಮಾಡಲು ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದಾರೆಂದು ನನಗೆ ತಿಳಿಯಿತು ಎಂದು ನಟಿ ಹೇಳಿದರು.

ತನ್ನ ಬಗ್ಗೆ ನಕಾರಾತ್ಮಕ ಮೀಮ್‌ ಮಾಡಿ ಟ್ರೋಲ್​ ಮಾಡುತ್ತಿರುವವರ ಬಳಿ ಮಾತನಾಡಲು ನನ್ನ ತಂಡಕ್ಕೆ ಕೇಳಿದೆ. ಇದಾದ ನಂತರ ತಿಳಿದ ವಿಷಯದಿಂದ ನಟಿಗೆ ಆಘಾತವಾಯಿತು. ಟ್ರೋಲ್​​ ಮಾಡುತ್ತಿರುವ ಸಾಮಾಜಿಕ ಜಾಲತಾಣದ ಖಾತೆದಾರರು ನನ್ನ ತಂಡಕ್ಕೆ ತಿಳಿಸಿದ ಮಾಹಿತಿ ಏನೆಂದರೆ ಈ ನೆಗೆಟಿವ್​​ ಟ್ರೋಲ್​ ಮಾಡಲು ಅವರು ಯಾರಿಂದಲೋ ಹಣ ಪಡೆಯುತ್ತಿರುವುದಾಗಿ ಹೇಳಿದರು.

ಇದನ್ನೆಲ್ಲಾ ನಿಲ್ಲಿಸಲು ಅಥವಾ ಅವರನ್ನು ಟ್ರೋಲ್ ಮಾಡಲು ಬಯಸಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಕೇಳಿದರು. ತನ್ನನ್ನು ಏಕೆ ಟ್ರೋಲ್ ಮಾಡಲಾಗುತ್ತಿದೆ ಎಂದು ತಿಳಿದಿಲ್ಲ, ಕೆಲವೊಮ್ಮೆ ತನ್ನ ಪೋಸ್ಟ್‌ಗಳಿಗೆ ವಿಚಿತ್ರವಾದ ಕಾಮೆಂಟ್‌ಗಳು ಬರುತ್ತವೆ ಎಂದು ನಟಿ ಹೇಳಿದರು. ಪ್ರೊಫೈಲ್ ಅನ್ನು ಪರಿಶೀಲಿಸಿದಾಗ ಯಾವುದೇ ಫೋಟೋ ಅಥವಾ ಪೋಸ್ಟ್‌ಗಳು ಇರುವುದಿಲ್ಲ. ಇವೆಲ್ಲವೂ ಹಣ ನೀಡಿ ಸೃಷ್ಟಿಸಲಾದ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳು ಎಂದು ತಿಳಿಸಿದರು.

ಪೂಜಾ ಕೊನೆಯ ಬಾರಿಗೆ ಶಾಹಿದ್ ಕಪೂರ್ ಜತೆ ‘ದೇವಾ’ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ಣ್ ಧವನ್ ಜತೆ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​​)

ಟಾಲಿವುಡ್​ ಪ್ರಿನ್ಸ್​ ಮಹೇಶ್​​ ಬಾಬು ಪುತ್ರ ಗೌತಮ್​​ ನಟನೆಯ ಮೊದಲ ವಿಡಿಯೋ ವೈರಲ್; ಫ್ಯಾನ್ಸ್​ ಹೇಳಿದ್ದು ಹೀಗೆ.. | Gautam Ghattamaneni

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…