ಟಾಲಿವುಡ್​ ಪ್ರಿನ್ಸ್​ ಮಹೇಶ್​​ ಬಾಬು ಪುತ್ರ ಗೌತಮ್​​ ನಟನೆಯ ಮೊದಲ ವಿಡಿಯೋ ವೈರಲ್; ಫ್ಯಾನ್ಸ್​ ಹೇಳಿದ್ದು ಹೀಗೆ.. | Gautam Ghattamaneni

ಹೈದರಾಬಾದ್​​: ಟಾಲಿವುಡ್​ ಟ್ಯಾಲೆಂಟೆಡ್​​ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ SSMB29 ಸಿನಿಮಾಕ್ಕಾಗಿ ಸೂಪರ್​ಸ್ಟಾರ್​​​ ಮಹೇಶ್ ಬಾಬು ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದರು. ಆದರೀಗ ಅವರ ಮಗ ಗೌತಮ್​​​ ಅವರ ಸರದಿ, ಹೌದು ಸಾಮಾಜಿಕ ಜಾಲತಾಣದಲ್ಲಿ ಗೌತಮ್​ ಘಟ್ಟಮನೇನಿ(Gautam Ghattamaneni) ನಟನೆಯ ವಿಡಿಯೋವೊಂದು ವೈರಲ್​ ಆಗಿದ್ದು, ಸದ್ಯ ಅಭಿಮಾನಿಗಳಲ್ಲಿ ಇದು ಚರ್ಚೆಯ್​ ಹಾಟ್​​ ಟಾಪಿಕ್​ ಆಗಿದೆ.

ಇದನ್ನು ಓದಿ: ಬೆಟ್ಟಿಂಗ್ ಆ್ಯಪ್ ಪ್ರಕರಣ; ವಿಜಯ್ ದೇವರಕೊಂಡ ವಿರುದ್ಧ ಎಫ್​ಐಆರ್​.. ಈ ಕುರಿತು ನಟನ ತಂಡದಿಂದ ಸ್ಪಷ್ಟನೆ | Vijay Deverakonda

ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ಪ್ರಸ್ತುತ ಅಮೆರಿಕದ ಪ್ರತಿಷ್ಠಿತ NYU ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್‌ನಲ್ಲಿ ನಾಟಕ ಮತ್ತು ಪ್ರದರ್ಶನ ಕಲೆಗಳಲ್ಲಿ ನಾಲ್ಕು ವರ್ಷಗಳ ಪದವಿ ಪಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಳ್ಳುವ ಗೌತಮ್ ನಿನ್ನೆ ರಾತ್ರಿಯಿಂದ ಸಖತ್​​​ ವೈರಲ್​ ಆಗುತ್ತಿದ್ದಾರೆ.

ಗೌತಮ್‌ ಅವರ ಮೊದಲ ಪರದೆಯ ಪ್ರದರ್ಶನವನ್ನು ಪ್ರದರ್ಶಿಸುವ ವಿಡಿಯೋವೊಂದು ನಿನ್ನೆ ರಾತ್ರಿ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಅದು ವೈರಲ್ ಆಗುತ್ತಿದೆ. ಅದರಲ್ಲಿ ಅವರು ಊಟದ ಮೇಜಿನ ಬಳಿ ಹುಡುಗಿಯ ಜತೆ ನಡೆದ ಬಿಸಿ ವಾದದ ಸಮಯದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ನೋಡಿದ ನಂತರ ಅಭಿಮಾನಿಗಳು ಗೌತಮ್ ಅವರ ಆಕರ್ಷಕ ನೋಟವು ಅವರ ತಂದೆ ಮಹೇಶ್ ಬಾಬು ಅವರ ನಿಖರವಾದ ಪ್ರತಿರೂಪವಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಗೌತಮ್​​​, ಮಹೇಶ್ ಬಾಬು ಅವರ ಪರಂಪರೆಯನ್ನು ಮುಂದುವರಿಸಲು ನಿಜವಾದ ಉತ್ತರಾಧಿಕಾರಿ ಎಂದು ಹೇಳುತ್ತಿದ್ದಾರೆ.

ಗೌತಮ್ ಅವರ ಸಹೋದರಿ ಸಿತಾರ ಅವರು ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ತಮ್ಮ ಸಹೋದರ ಶೀಘ್ರದಲ್ಲೇ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ದೃಢಪಡಿಸಿದರು. ಆದರೆ ಗೌತಮ್ ತಮ್ಮ ನಟನಾ ಯೋಜನೆಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಗೌತಮ್ ನಟನಾ ಜಗತ್ತಿಗೆ ಕಾಲಿಟ್ಟು ಬೆಳ್ಳಿತೆರೆಯನ್ನು ಆಳಲು ಅಭಿಮಾನಿಗಳು ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಅಂದ್ಹಾಗೆ ಗೌತಮ್ ನಟಿಸುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ಬಿಡುಗಡೆಯಾದ ‘ನೇನೊಕ್ಕಡಿನೆ’ ಚಿತ್ರದಲ್ಲಿ ಗೌತಮ್, ಮಹೇಶ್ ಬಾಬು ಅವರ ಕಿರಿಯ ವಯಸ್ಸಿನ ಪಾತ್ರವನ್ನು ನಿರ್ವಹಿಸಿದರು.(ಏಜೆನ್ಸೀಸ್​​)

ದಾಖಲೆ ಸೃಷ್ಟಿಸಿದ MF ಹುಸೇನ್ ಚಿತ್ರಕಲೆ; ನ್ಯೂಯಾರ್ಕ್ ಹರಾಜಿನಲ್ಲಿ ₹118 ಕೋಟಿಗೆ ಮಾರಾಟ | MF Husain Painting

Share This Article

ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food

Salty Food : ಹುಟ್ಟಿದ ಮಗುವನ್ನು ದೊಡ್ಡದಾಗಿ ಬೆಳೆಯುವವರಿಗೂ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಟ್ಟೆ…

ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ.…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಕಾಲಿನಿಂದ ತುಳಿಯಬೇಡಿ!  ನೀವು ಖಂಡಿತವಾಗಿಯೂ ಆರ್ಥಿಕ ತೊಂದರೆಗೆ ಸಿಲುಕುವಿರಿ.. Vasthu Tips

Vasthu Tips: ಹಿರಿಯರು ಹೇಳಿದ್ದನ್ನು  ಅನೇಕ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವು ಕೆಲವು ವಸ್ತುಗಳನ್ನು ದೇವರು…