More

    ಕುಂದಾನಗರಿಯಲ್ಲಿ ಪ್ರಧಾನಿ ರೋಡ್ ಷೋ; ದಾರಿಯುದ್ದಕ್ಕೂ ಕೇಳಿ ಬಂದ ಮೋದಿ… ಮೋದಿ ಜೈಕಾರ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ, ನಗರದ ಹೃದಯಭಾಗದಲ್ಲಿರುವ ಚನ್ನಮ್ಮ ವೃತ್ತದಿಂದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿವರೆಗೆ 12 ಕಿ.ಮೀ ರೋಡ್​ ಷೋ ನಡೆಸಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಪ್ರಧಾನಿ ರೋಡ್ ಷೋನಲ್ಲಿ ಭಾಗವಹಿಸಿದ್ದಾರೆ. ದಾರಿಯುದ್ದಕ್ಕೂ ಕಾರ್ಯಕರ್ತರು, ಅಭಿಮಾನಿಗಳು ಮೋದಿ… ಮೋದಿ ಎಂದು ಜೈಕಾರ ಕೂಗಿದ್ದಾರೆ. ರೋಡ್ ಷೋ ಮಾರ್ಗದಲ್ಲಿ 10 ಸ್ಥಳಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

    ಇದನ್ನೂ ಓದಿ: ತಾಯಿ – ಮಗನನ್ನು ಬಲಿ ತೆಗೆದುಕೊಂಡ ವಾಟರ್ ಹೀಟರ್!

    ಶಿವಮೊಗ್ಗದಿಂದ ಪ್ರಧಾನಿ ಮೋದಿ ಬೆಳಗಾವಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ​ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ ಹಿನ್ನೆಲೆ; 10 ಕ್ವಿಂಟಾಲ್ ಹೂ ಸಿದ್ಧಗೊಳಿಸಿದ ಕಾರ್ಯಕರ್ತರು

    ನರೇಂದ್ರ ಮೋದಿ ಕಣ್ಣತುಂಬಿಸಿಕೊಳ್ಳಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಅಸಂಖ್ಯಾತ ಸಂಖ್ಯೆಯ ಜನರು ಸೇರಿದ್ದು, ರೋಡ್ ಷೋ ದಾರಿಯುದ್ದಕ್ಕೂ ಸಂಭ್ರಮದ ವಾತಾವರಣ ಮೂಡಿತ್ತು. ಬೆಳಗಾವಿಯಲ್ಲಿ ವೈಭವದ ರೋಡ್​ ಷೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಗರದ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ಆಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts