ಬೆಂಗಳೂರಿನಲ್ಲಿ ಪ್ರಧಾನಿ ರೋಡ್ ಶೋ | ಮೋದಿ ಮೇಲೆ ಹೂ ಮಳೆ ಸುರಿಸಿದ ಅಭಿಮಾನಿಗಳು

Modi Road Show
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಯಲ್ಲಿ ಭರ್ಜರಿ ಶೋ ನಡೆಸಿದ್ದಾರೆ. ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿಯವರೆಗೆ ಸುಮಾರು 5 ಕಿ.ಮೀ ದೂರದವರೆಗೆ ರೋಡ್​ ಶೋನಲ್ಲಿ ಪ್ರಧಾನಿ ಭಾಗವಹಿಸಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ, ಚಲವಾದಿ ನಾರಾಯಣ ಸ್ವಾಮಿ ಸಾಥ್ ನೀಡಿದರು.

ಮೋದಿ... ಮೋದಿ... ಮೋದಿ...

ಪ್ರಧಾನಿ ಮೋದಿ ಜನರತ್ತ ಕೈಬೀಸುತ್ತಾ ರೋಡ್ ಶೋನಲ್ಲಿ ಸಾಗಿದರೆ, ದಾರಿಯುದ್ಧಕ್ಕೂ ಸೇರಿದ್ದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ... ಮೋದಿ... ಎಂದು ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು, ಕೇಸರಿ ಶಾಲು ಹಾಕಿಕೊಂಡು ಮಿಂಚಿದ್ದಾರೆ. ವಿವಿಧೆಡೆಯಿಂದ ಬಂದ ಕಲಾ ತಂಡಗಳು ರೋಡ್​ ಶೋಗೆ ಸಾಥ್ ನೀಡಿದೆ. ಸಾಂಸ್ಕೃತಿಕ ಕಲಾತಂಡಗಳು ಆಗಮಿಸಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ ಮಾಡಿವೆ. 

ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಂಡ ಜನರು

ಪ್ರಧಾನಿ ಮೋದಿ ರೋಡ್ ಶೋ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲೆಂದೇ ಮಕ್ಕಳು ಹಾಗೂ ವೃದ್ಧರು ಬಂದಿದ್ದರು. ರಸ್ತೆಯ ಇಕ್ಕೆಲಗಳಲ್ಲೂ ಕಾರ್ಯಕರ್ತರು, ಯುವಕ-ಯುವತಿಯರು ಘೋಷಣೆ ಕೂಗುತ್ತಾ, ರೋಡ್ ಶೋ ರಂಗು ಹೆಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net