ಕಲ್ಪತರು ನಾಡಿನಲ್ಲಿ ಎಚ್​ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

Modi (1)
Published on

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಎಚ್​​ಎಎಲ್(HAL) ಹೆಲಿಕಾಪ್ಟರ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಎಚ್​​ಎಲ್ ಘಟಕ ನಿರ್ಮಿಸಿರುವ ಹೆಲಿಕಾಪ್ಟರ್​ನ್ನು ವೀಕ್ಷಿಸಿದರು. ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. 2016ರಲ್ಲಿ ಪ್ರಧಾನಿ ಮೋದಿ ಎಚ್​ಎಎಲ್​ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದೆ. ಲಘು ಉಪಯೋಗಿ ಹೆಲಿಕಾಪ್ಟರ್​ಗಳ ತಯಾರಿಕೆಗಾಗಿ ಇಲ್ಲಿ ಆಗಲಿದೆ. 615 ಎಕರೆ ಪ್ರದೇಶದಲ್ಲಿರುವ ಈ ಘಟಕ ಅತ್ಯಾಧುನಿಕ ಕೈಗಾರಿಕಾ 4.0 ಸಾಧನಗಳು ಹಾಗೂ ತಂತ್ರಗಳೊಂದಿಗೆ ಸುಸಜ್ಜಿತ ವ್ಯವಸ್ಥೆ ಹೊಂದಿದೆ. ಈ ಘಟಕದಲ್ಲ ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net