ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ಕತ್ತು ಸೀಳಿಕೊಂಡು ಪ್ರಾಣಬಿಟ್ಟ Priest

priest
Published on

ವಾರಣಾಸಿ: ತಾನು ಎಷ್ಟೇ ಪೂಜೆ ಮಾಡಿದರು ಕಾಳಿ ಮಾತೆ ತನ್ನ ಮುಂದೆ ಪ್ರತ್ಯಕ್ಷವಾಗಲಿಲ್ಲ ಎಂಬ ಕಾರಣಕ್ಕೆ ಅರ್ಚಕರೊಬ್ಬರು (Priest) ಕತ್ತು ಸೀಳಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಮೃತರನ್ನು ಅಮಿತ್​ ಶರ್ಮ (Priest) ಎಂದು ಗುರುತಿಸಲಾಗಿದ್ದು, ಗೈಘಾಟ್ ಪಥಂಗಲಿಯಲ್ಲಿನ ತಮ್ಮ ನಿವಾಸದಲ್ಲಿ ಈ ರೀತಿ ಮಾಡಿಕೊಂಡಿದ್ದಾರೆ. ವಿಚಾರ ತಿಳಿದು ಸ್ಥಳೀಯರು ಹಾಗೂ ನೆರೆಹೊರೆಯವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಎಸಿಪಿ ಇಶಾನ್​ ಸೋನಿ, ಕಾಳಿ ದೇವಿಯ ಅಪ್ಪಟ ಭಕ್ತರಾಗಿದ್ದ ಅಮಿತ್​ ಶರ್ಮ ಅವರು ತಮ್ಮ ಕೋಣೆಯಲ್ಲಿ 24 ಘಂಟೆಗಳ ಕಾಲ ಪ್ರಾರ್ಥನೆಯನ್ನು ಮಾಡಿದ್ದರು. ಕಾಳಿ ಮಾತೆಯನ್ನು ನಿರಂತರವಾಗಿ ಪೂಜಿಸಿದರೆ ಆಕೆ ಪ್ರತ್ಯಕ್ಷಳಾಗುತ್ತಾಳೆ ಎಂದು ನಂಬಿದ್ದ ಅರ್ಚಕರು ದೇವಿಯು ತನ್ನ ಮುಂದೆ ಕಾಣಿಸಿಕೊಳ್ಳದಿದ್ದಾಗ ಕತ್ತು ಸೀಳಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗೈಘಾಟ್ ಪಥಂಗಲಿಯಲ್ಲಿ ಏಳು ವರ್ಷಗಳಿಂದ ವಾಸಿಸುತ್ತಿದ್ದ ಅಮಿತ್​ ಪ್ರವಾಸಿಗರನ್ನು ಧಾರ್ಮಿಕ ತೀರ್ಥಯಾತ್ರೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಇಶಾನ್​ ಸೋನಿ ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net