ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಬುಧವಾರ) ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಂಸತ್ ಭವನದಲ್ಲಿ ದೋಷವಿದೆ ಎಂದು ಹೇಳಿದ್ದ ವಾಸ್ತು ತಜ್ಞ ಬಂಧನ
ಸದಾ ಜನಸಂದಣಿ ಇರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಮುರ್ಮು ಅವರನ್ನು ನೋಡಿದ ಪ್ರಯಾಣಿಕರು ಖುಷಿಪಟ್ಟರು. ಭಾರೀ ಭದ್ರತೆಯೊಂದಿಗೆ ಬೆಂಗಾವಲು ಪಡೆಯನ್ನು ಬಿಟ್ಟು ಸಾಮಾನ್ಯ ಮಹಿಳೆಯರಂತೆ ಕೆಲಕಾಲ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
President Droupadi Murmu takes ride in Delhi Metro@rashtrapatibhvn @DCP_DelhiMetro pic.twitter.com/2j1bvec466
— DD News (@DDNewslive) February 7, 2024
ಮುರ್ಮು ಅವರು ಹಳದಿ ಸೀರೆಯುಟ್ಟು ಪ್ರಯಾಣ ಬೆಳಸಿದರು. ಈ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದರು. ದೆಹಲಿ ಮೆಟ್ರೊದ ನೇರಳೆ ಮಾರ್ಗದಲ್ಲಿ ಮುರ್ಮು ಪ್ರಯಾಣಿಸಿದ್ದಾರೆ. ಕಾಶ್ಮೀರ್ ಗೇಟ್– ರಾಜಾ ನಹರ್ ಸಿಂಗ್ (ಬಲ್ಲಭಗಢ) ನಡುವೆ ಈ ನೇರಳೆ ಮಾರ್ಗ ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | President Droupadi Murmu takes a metro ride in Delhi. pic.twitter.com/Elc2pdUmHJ
— ANI (@ANI) February 7, 2024
ಇದೇ ವೇಳೆ ಮೆಟ್ರೋ ರೈಲಿನಲ್ಲಿರುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ರಾಷ್ಟ್ರಪತಿ ಮುಮುರ್ ಅವರ ಜೊತೆ ದೆಹಲಿ ಮೆಟ್ರೋ ರೈಲು ನಿಗಮದ ಎಂಡಿ ವಿಕಾಸ್ ಕುಮಾರ್ ಇದ್ದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚಿಗೆ ಅಮೃತ್ ಉದ್ಯಾನ್-2024 ಜನರು ರಾಷ್ಟ್ರಪತಿ ಭವನದ ಇತರ ಉದ್ಯಾನವನಗಳಿಗೆ ಭೇಟಿ ನೀಡಲು ಪ್ರಾರಂಭಿಸಲಾಗಿದೆ. ಜೊತೆಗೆ ಮೊಘಲ್ ಉದ್ಯಾನವನ್ನು ಅಮೃತ್ ಉದ್ಯಾನ್ ಎಂದು ಮರುನಾಮಕರಣ ಮಾಡಲಾಗಿದೆ. ಇದು ಮಾರ್ಚ್ 31 ರವರೆಗೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ದೆಹಲಿ ಮೆಟ್ರೋ ಭೇಟಿ ನೀಡುವ ಪ್ರವಾಸಿಗರಿಗೆ ಉಚಿತ ಸೇವೆ ನೀಡುತ್ತದೆ. ನಾಲ್ಕನೇ ಗೇಟ್‌ನಿಂದ ಪ್ರಯಾಣಿಕರು ಉಚಿತವಾಗಿ ರಾಷ್ಟ್ರಪತಿ ಭವನಕ್ಕೆ ಹೋಗಬಹುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
U19 ವಿಶ್ವಕಪ್: ಗೆಲುವಿನ ಹಿಂದಿನ ರಹಸ್ಯ ತಿಳಿಸಿದ ಟೀಂ ಇಂಡಿಯಾ ನಾಯಕ ಉದಯ್!