More

  U19 ವಿಶ್ವಕಪ್: ಗೆಲುವಿನ ಹಿಂದಿನ ರಹಸ್ಯ ತಿಳಿಸಿದ ಟೀಂ ಇಂಡಿಯಾ ನಾಯಕ ಉದಯ್!

  ನವದೆಹಲಿ: ಅಂಡರ್ 19 ವಿಶ್ವಕಪ್ ನ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ, ಬಿನೋನಿಯ ವಿಲ್ಲೌಮೂರಿ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2 ವಿಕೆಟ್ ರೋಚಕ ಗೆಲುವು ಸಾಧಿಸಿ ಫೈನಲ್ ತಲುಪಿದೆ. ಭಾನುವಾರ ಇದೇ ಮೈದಾನದಲ್ಲಿ ಫೈನಲ್​ ಪಂದ್ಯ ನಡೆಯಲಿದೆ.

  ಇದನ್ನೂ ಓದಿ:ವಿಜಯ್ ಬಳಿಕ ಮತ್ತೊಬ್ಬ ಸ್ಟಾರ್​ ಹೀರೋ ರಾಜಕೀಯಕ್ಕೆ ಎಂಟ್ರಿ? ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ?

  ಭಾರತದ ನಾಯಕ ಉದಯ್ ಸಹರಾನ್ ಐದನೇ ಬಾರಿಗೆ U19 ವಿಶ್ವಕಪ್ ಫೈನಲ್‌ಗೆ ತಲುಪಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ 81 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಉದಯ್ ಸಹಾರಣ್ ತನ್ನ ಆಟದ ಮೇಲೆ ತಂದೆಯ ಪ್ರಭಾವ ಹೆಚ್ಚಾಗಿದ್ದು, ಅವರಿಂದಲೇ ಪಂದ್ಯವನ್ನು ಅಂತಿಮ ಹಂತದವರೆಗೆ ತೆಗೆದುಕೊಂಡು ಹೋಗುವ ಕಲೆಯನ್ನು ಕಲಿತಿದ್ದೇನೆ ಎಂದು ನುಡಿದರು.

  U19 ವಿಶ್ವಕಪ್: ಗೆಲುವಿನ ಹಿಂದಿನ ರಹಸ್ಯ ತಿಳಿಸಿದ ಟೀಂ ಇಂಡಿಯಾ ನಾಯಕ ಉದಯ್!

  ನನ್ನ ಆಟದ ಶೈಲಿಯಲ್ಲಿ ನನಗೆ ವಿಶ್ವಾಸವಿತ್ತು. ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಕಾಲಿಟ್ಟಾಗ ಕೊನೆಯವರೆಗೂ ಕ್ರೀಸ್‌ನಲ್ಲಿ ಇರಲು ನಿರ್ಧರಿಸಿದ್ದೆ. ಉತ್ತಮ ಜೊತೆಯಾಟವಿದ್ದರೆ ಗೆಲ್ಲುವುದು ಕಷ್ಟವೇನಲ್ಲ ಎಂದು ನಂಬಿದ್ದೆ. ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಬೇಕೆಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ ಆದರೆ ನಾನು ಹೊಡೆದದ್ದು ಕೇವಲ ಆರು ಬೌಂಡರಿಗಳು ಎಂದು ನೋವು ವ್ಯಕ್ತಪಡಿಸಿದರು.

  ಪಂದ್ಯ ಮುಗಿದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ಮಾತನಾಡಿದ ಭಾರತ ತಂಡದ ಅಂಡರ್ 19 ನಾಯಕ ಉದಯ್ ಸಹಾರಣ್. ನನ್ನ ತಂದೆಯಿಂದ ನಾನು ಹೀಗೆ ಆಡುವುದನ್ನು ಕಲಿತೆ. ಅವರಿಗೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಅಗತ್ಯವಿದ್ದರೆ ಕೊನೆಯಲ್ಲಿ ಭಾರೀ ಹೊಡೆತಗಳನ್ನು ಹೊಡೆಯುವುದನ್ನು ಪರಿಗಣಿಸಿ. ಕ್ರೀಸ್‌ನಲ್ಲಿ ಉಳಿಯುವುದು ಮುಖ್ಯವಾಗಿತ್ತು ಎಂದು ಹೇಳಿದರು.

  ಚೆಂಡು ಹೆಚ್ಚು ತಿರುವು ಪಡೆಯುತ್ತಿತ್ತು: ನಾನು ಬ್ಯಾಟಿಂಗ್ ಮಾಡಲು ಬಂದಾಗ ಚೆಂಡು ಹೆಚ್ಚು ಬೌನ್ಸ್ ಆಗಿ ತಿರುವು ಪಡೆಯುತ್ತಿದ್ದರಿಂದ ರನ್ ಗಳಿಸಲು ಕಷ್ಟವಾಗುತ್ತಿತ್ತು. ಆದರೆ ಪಂದ್ಯ ಸಾಗುತ್ತಿದ್ದಂತೆ ಚೆಂಡು ಒಳಪು ಕಳೆದುಕೊಂಡು ಬ್ಯಾಟ್ ಮಾಡಲು ಸಹಕರಿಸಿತು. ಚೆಂಡು ಸ್ವಲ್ಪ ಬೌನ್ಸ್ ಆದರೂ ನಾವು ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದೆವು ಎಂದಿದ್ದಾರೆ.

  ನಮ್ಮ ಕೋಚಿಂಗ್ ಸಿಬ್ಬಂದಿಯಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತು. ನನ್ನ ನಾಯಕತ್ವದಲ್ಲಿ ಸೆಮಿಸ್ ಗೆದ್ದು ಫೈನಲ್ ತಲುಪಿದ್ದು ಸಂತಸ ತಂದಿದೆ. “ಈ ಸೆಮಿಸ್ ಪಂದ್ಯವು ಅಂತಿಮ ಯುದ್ಧದ ಮೊದಲು ನಮಗೆ ಉತ್ತಮ ಅಭ್ಯಾಸ ಪಂದ್ಯದಂತಿದೆ. ಅಲ್ಲಿ ನಾವು ಗುಣಮಟ್ಟದ ಪ್ರದರ್ಶನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮುತ್ತೇವೆ” ಎಂದು ಸಹರಾನ್ ವಿಶ್ವಾಸ ವ್ಯಕ್ತಪಡಿಸಿದರು.

  ಸೃಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 245 ರನ್ ಗಳಿಗೆ ನಿಯಂತ್ರಿಸಿದರು. ಈ ಸುಲಭ ಗುರಿಯನ್ನು ಹಿಂಬಾಲಿಸಿದ ಭಾರತದ ಕಿರಿಯರ ತಂಡ 32 ರನ್ ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಹಿಂದಿನ ಪಂದ್ಯದಲ್ಲಿ ಶತಕಗಳ ಸಂಭ್ರಮ ಕಂಡಿದ್ದ ಸಚಿನ್ ದಾಸ್ (96 ರನ್) ಹಾಗೂ ನಾಯಕ ಉದಯ್ ಸಹರನ್ (81 ರನ್) 5ನೇ ವಿಕೆಟ್ ಗೆ 171 ರನ್ ಗಳ ಜೊತೆಯಾಟ ನೀಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು.

  5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts