More

  5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

  ಹೈದರಾಬಾದ್​: ಬಾಲಿವುಡ್‌ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಖಾತೆಗೆ ವರ್ಷದ ಕೊನೆಯಲ್ಲಿ ಭರ್ಜರಿಯ ಸಕ್ಸಸ್‌ ಜಮೆಯಾಗಿದೆ. ಇವರಿಬ್ಬರು ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘ಅನಿಮಲ್’ ಸಿನಿಮಾವು ಡಿ.1ರಂದು ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೇಟೆಯಾಡುತ್ತಿದೆ.

  ಇದನ್ನೂ ಓದಿ:ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

  5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

  ರಣಬೀರ್ ಕಪೂರ್ ಕರಿಯರ್‌ನಲ್ಲಿ ಇದುವರೆಗೂ ಯಾವ ಸಿನಿಮಾವೂ ಮಾಡಿರದಂತಹ ದಾಖಲೆಯನ್ನು ‘ಅನಿಮಲ್’ ಸೃಷ್ಟಿಸಿದೆ. ಅನಿಮಲ್ ಚಿತ್ರ ಒಂದು ವಾರದಲ್ಲಿಯೇ 500 ಕೋಟಿ ರೂ.ಗಿಂತ ಅಧಿಕ ಮೊತ್ತ ಗಳಿಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣಗೂ ಎಲ್ಲೆಡೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಬಾಲಿವುಡ್‌ನಲ್ಲಿ ಗಲ್ಲಾ ಪೆಟ್ಟಿಗೆ ಕಮಾಲ್ ಮಾಡುತ್ತಿರುವ ಅನಿಮಲ್ ಚಿತ್ರದ ಗೆಲುವಿನಲ್ಲಿ ರಶ್ಮಿಕಾ ತೇಲಾಡುತ್ತಿದ್ದಾರೆ. ಬರೋಬ್ಬರಿ 6 ಚಿತ್ರಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ರಶ್ಮಿಕಾಗೆ ಎಲ್ಲೆಡೆ ಭರ್ಜರಿ ಮರ್ಯಾದೆ ಸಿಗುತ್ತಿದೆ. ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆ ತಾನೆ 1 ಕೋಟಿ, 2 ಕೋಟಿ ರೂ. ನಂತೆ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರ ಗೆಲ್ಲುತ್ತಿದ್ದಂತೆಯೇ ಸಂಭಾವನೆ ಮೊತ್ತವನ್ನು 4 ರಿಂದ 5 ಕೋಟಿ ರೂ.ಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್​ ಆಗಿತ್ತು.

  5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

  ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಶ್ಮಿಕಾ, ನಾನು ಸಂಭಾವಣೆ 4 ರಿಂದ 5 ಕೋಟಿ ರೂ. ಹೆಚ್ಚಳವಾಗಿದೆ ಎಂದು ಮೀಡಿಯಾದಲ್ಲಿ ವೈರಲ್​ ಆಗಿದೆ. ಇದೆಲ್ಲವನ್ನೂ ನೋಡಿದ ನಂತರ ನಾನು ಅದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. ಮತ್ತು ನನ್ನ ನಿರ್ಮಾಪಕರು ಏಕೆ ಎಂದು ಕೇಳಿದರೆ.. ಆಗ ನಾನು ಹೇಳುತ್ತೇನೆ ಮಾಧ್ಯಮಗಳು ಇದನ್ನು ಹೇಳುತ್ತಿವೆ ಸರ್.. ಮತ್ತು ನಾನು ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಅಂತ ಯೋಚಿಸಿ.. ನಾನೇನು ಮಾಡಲಿ? ಎಂದು ಟ್ಟೀಟ್​ ಮಾಡಿದ್ದಾರೆ.

  ಕರ್ನಾಟಕದ ಬೆಡಗಿ ಬಾಲಿವುಡ್‌ನಲ್ಲಿ ಗೆಲ್ಲುತ್ತಿದ್ದಂತೆ ಸಾಮಾಜಿಕ ಜಾಲತಾಣದ ಇನ್​ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆಯೂ ಅಧಿಕವಾಗಿದೆ. ಕಳೆದ ವಾರ ಕೇವಲ 30 ಮಿಲಿಯನ್ ಸಮೀಪದಲ್ಲಿದ್ದ ಫಾಲೋವರ್ಸ್ ಸಂಖ್ಯೆ ಈಗ ಬರೋಬ್ಬರಿ 40 ಮಿಲಿಯನ್‌ಗೆ ಹೆಚ್ಚಳವಾಗಿದೆ.

  ಈ ದೇಶವನ್ನೇ ಕಾಡುತ್ತಿದೆ ಭೀಕರ ಕಾಯಿಲೆ! ಭಾರತದಿಂದ ನೆರವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts