More

    ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

    ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತು. ಅಷ್ಟೇ ಅಲ್ಲದೆ ಈ ಜೋಡಿ ಡಿವೋರ್ಸ್ ತೆಗೆದುಕೊಳ್ಳಲಿದೆ ಎನ್ನಲಾಗ್ತಿತ್ತು. ಈ ರೂಮರ್ಸ್​ಗೆಲ್ಲಾ ಇದೀಗ ಬ್ರೇಕ್ ಬಿದ್ದಿದೆ.

    ಇದನ್ನೂ ಓದಿ:ತಮಿಳುನಾಡು: ರಾಜಕೀಯದಲ್ಲೂ ದಳಪತಿಗೆ ದೊರೆಯುವುದೇ ‘ವಿಜಯ’

    ಆ ಸುದ್ದಿಗೆ ಪೂರಕವಾಗುವ ರೀತಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ನಡೆದುಕೊಂಡಿದ್ದು ಕೂಡ ಅಚ್ಚರಿಗೆ ಕಾರಣ ಆಗಿತ್ತು. ಹಾಗಾದರೆ ನಿಜವಾಗಿಯೂ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಶೀಘ್ರದಲ್ಲೇ ಅವರು ಡಿವೋರ್ಸ್​ ಪಡೆಯುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಅವುಗಳಿಗೆಲ್ಲ ಉತ್ತರ ಎಂಬಂತೆ ಈಗ ಐಶ್ವರ್ಯಾ ರೈ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಗಾಸಿಪ್​ ಮಂದಿಯ ಬಾಯಿ ಮುಚ್ಚಿಸಿದ್ದಾರೆ.

    ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

    ಫೆಬ್ರವರಿ 5 ಸೋಮವಾರ ಅಭಿಷೇಕ್​ ಬಚ್ಚನ್​ ಬರ್ತ್​ಡೇ. ಆ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹತ್ತಿರದ ಸಂಬಂಧಿಕರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್​ ಬಚ್ಚನ್​ಗೆ ಹ್ಯಾಪಿ ಬರ್ತ್​ಡೇ ಎಂದು ಶುಭ ಕೋರಿದ್ದರೂ ಕೂಡ ಐಶ್ವರ್ಯಾ ರೈ ಕಡೆಯಿಂದ ಯಾವುದೇ ವಿಶ್​ ಬಂದಿರಲಲ್ಲ. ಹಾಗಾಗಿ ಎಲ್ಲರಿಗೂ ಅನುಮಾನ ಹೆಚ್ಚಾಗಿತ್ತು. ಆದರೆ ತಡವಾಗಿದ್ದರೂ, ಸಂಜೆ ವೇಳಗೆ ಒಂದು ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಐಶ್ವರ್ಯಾ ರೈ ಅವರು ಗಂಡನಿಗೆ ಶುಭಾಶಯ ತಿಳಿಸಿದ್ದಾರೆ.

    ಇದೀಗ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬದ ದಿನವಾದ ಇಂದು ನಟಿ ಐಶ್ವರ್ಯಾ ರೈ ಲವ್ಲಿ ವಿಶ್ ಮಾಡಿದ್ದಾರೆ. ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಜನ್ಮದಿನದ ಶುಭಾಶಯಗಳು ಹೆಚ್ಚು ಸಂತೋಷ, ಪ್ರೀತಿ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ದೇವರು ನೀಡಲಿ ಎಂದು ಬರೆದಿದ್ದಾರೆ.
    ಫ್ಯಾಮಿಲಿ ಫೋಟೋ ಜೊತೆ ಅಭಿಷೇಕ್ ಬಚ್ಚನ್ ಬಾಲ್ಯದ ಫೋಟೋವನ್ನು ಕೂಡ ಐಶ್ವರ್ಯಾ ಶೇರ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಈ ಬಾಲ್ಯದ ಫೋಟೋದಲ್ಲಿ ಚೆಂದದ ನಗುಬೀರಿದ್ದಾರೆ.

    ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಖುಷಿ, ಪ್ರೀತಿ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ದೇವರ ನೀಡಲಿ. ಯಾವಾಗಲೂ ಮಿಂಚುತ್ತಿರಿ’ ಎಂದು ಪತಿಗೆ ಐಶ್ವರ್ಯಾ ರೈ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

    2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಐಶ್ವರ್ಯಾ ರೈ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರಿಸುತ್ತಿಲ್ಲ. ತೀರಾ ಅಪರೂಪಕ್ಕೆ ಒಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ಅವರು ಸಿನಿಮಾಗಳ ಜೊತೆ ವೆಬ್​ ಸಿರೀಸ್​ಗಳ ಮೂಲಕವೂ ಮಿಂಚುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts