ಭಾರತವನ್ನು ಇನ್ನೆಷ್ಟು ಭಾಗ ಮಾಡಲು ಹೊರಟಿದ್ದೀರಿ; ಕಾಂಗ್ರೆಸ್​ ವಿರುದ್ಧ ಮೋದಿ ಆಕ್ರೋಶ

modi
Published on

ನವದೆಹಲಿ: ಈ ಬಾರಿ ಲೋಕಸಭೆಯ ಕೊನೆಯ ಭಾಷಣದಲ್ಲಿ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಪ್ರಸ್ತಾಪಿಸಿ, ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ದೇಶವನ್ನು ಈಗಾಗಲೇ ವಿಭಜನೆ ಮಾಡಿದ್ದೀರಿ. ಹಿಂದಿನಿಂದಲೂ ವಿಭಜನೆ ಮಾಡುತ್ತಲೇ ಆಡಳಿತ ನಡೆಸಿದ್ದೀರಿ. ಮುಂದೆ ದೇಶವನ್ನು ಇನ್ನೆಷ್ಟು ಭಾಗ ಮಾಡಲು ಹೊರಟಿದ್ದೀರಿ. ಒಬ್ಬ ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಒಡೆದ ಮೇಲೂ ನಿಮಗೆ ತೃಪ್ತಿ ಇಲ್ಲವೇ? ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದರು.

ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟರು.

ಭಯೋತ್ಪಾದನೆ, ನಕ್ಸಲ್ ಆತಂಕ ಸೇರಿದಂತೆ ಯಾವುದೇ ದಾಳಿಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಭಾರತೀಯ ಸೇನೆ ಗಡಿಯಲ್ಲಿ ಸಶಕ್ತವಾಗಿ ಹೋರಾಡುತ್ತಿದೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಾಗಬೇಕು. ರಾಜಕೀಯ ನಾಯಕರ ಚುಚ್ಚು ಮಾತಿನಿಂದ ಸೇನೆ ಆತ್ಮವಿಶ್ವಾಸ ಕುಗ್ಗಲಿದೆ, ಅನ್ನೋ ಭಾವನೆ ನಿಮ್ಮಲ್ಲಿ ನಿಮ್ಮ ಅಲೋಚನೆ ಬದಲಿಸಿ ಎಂದು ಮೋದಿ ಸಲಹೆ ನೀಡಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ಬಜೆಟ್ ಕುರಿತು ಟೀಕಿಸುತ್ತಾ ಆಡಿದ ಪ್ರತ್ಯೇಕ ರಾಷ್ಟ್ರದ ಮಾತು ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಸುರೇಶ್​ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಕರ್ನಾಟಕ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಖಂಡಿಸುತ್ತಿದ್ದಾರೆ. ಅಲ್ಲದೇ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಕಾಂಗ್ರೆಸ್ ಸರ್ಕಾರ ಮೊದಲು ತನ್ನ ಸಂಸದ ಡಿಕೆ ಸುರೇಶ್​ ಅವರಿಗೆ ಬುದ್ಧಿ ಮಾತು ಹೇಳಲಿ. ಅದರ ಬದಲು ದೇಶ ವಿರೋಧಿ ಹೇಳಿಕೆ ಕೊಟ್ಟ ಸಂಸದರನ್ನು ರಕ್ಷಣೆ ಮಾಡುವಂತಹ ನೀಚ ಕೆಲಸ ಮಾಡಬಾರದು ಮಾಜಿ ಶಾಸಕ ರಾಜೀವ್ ಎಚ್ಚರಿಕೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net