More

    ಈ ದೇಶವನ್ನೇ ಕಾಡುತ್ತಿದೆ ಭೀಕರ ಕಾಯಿಲೆ! ಭಾರತದಿಂದ ನೆರವು

    ನವದೆಹಲಿ: ಆಫ್ರಿಕನ್ ದೇಶವಾದ ಜಾಂಬಿಯಾ ದೇಶವನ್ನು ಕಾಲರಾ ರೋಗ ಹರಡುತ್ತಿರುದೆ. ಸಾವಿರಾರು ಮಂದಿ ಈ ಅತಿಸಾರ ರೋಗಕ್ಕೆ ತುತ್ತಾಗಿದ್ದರೆ. ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ನೆರವಿನ ಹಸ್ತವನ್ನು ನೀಡಿದೆ.

    ಇದನ್ನೂ ಓದಿ:ಭಾರತ ಹಾಕಿ ಆಟಗಾರನ ಮೇಲೆ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು

    ಭಾರತದಿಂದ ಸುಮಾರು 3.5 ಟನ್​ನಷ್ಟು ಕ್ಲೋರಿನ್ ಮಾತ್ರೆಗಳು, ಒಆರ್‌ಎಸ್ ಪ್ಯಾಕೆಟ್‌ಗಳು ಮತ್ತು ಶುದ್ಧ ಕುಡಿಯಯವ ನೀರಿನ ಬಾಟಲ್​ಗಳು ಕಾರ್ಗೋ ವಾಣಿಜ್ಯ ವಿಮಾನದ ಮೂಲಕ ಮಂಗಳವಾರ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಾಂಬಿಯಾ ಕಾಲರಾ ಏಕಾಏಕಿ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, 2024 ಜನವರಿ 31ರ ಅಂಕಿ ಅಂಶದ ಪ್ರಕಾರ ಜಾಂಬಿಯಾ ದೇಶದಲ್ಲಿ ಕಾಲರಾ ಸೋಂಕಿಗೆ 16 ಸಾವಿರಕ್ಕೂ ಹೆಚ್ಚು ಜನ ತುತ್ತಾಗಿದ್ದು 600ಕ್ಕೂ ಹೆಚ್ಚು ಅಧಿಕ ಮಂದಿ ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ.4 ರಷ್ಟು ತಲುಪಿದೆ. ಲುಸುಕಾ ಪ್ರಾಂತ್ಯದಲ್ಲೇ ಹೆಚ್ಚು ಸಾವು ಸಂಭವಿಸಿದೆ. ಈ ಕಾಯಿಲೆಯಿಂದ 3 ಲಕ್ಷ ಜನ ಅಪಾಯದಲ್ಲಿದ್ದಾರೆ ಎಂದು ವರದಿ ಮಾಡಿದೆ.

    ದೇಶದ ಹತ್ತರಲ್ಲಿ ಒಂಬತ್ತು ಪ್ರಾಂತ್ಯಗಳಲ್ಲಿ ಈ ರೋಗ ಹರಡಿದೆ. ಸರ್ಕಾರವು ಕ್ರೀಡಾಂಗಣಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದೆ. ಸಾಮೂಹಿಕ ವ್ಯಾಕ್ಸಿನೇಷನ್ ನೀಡುತ್ತಿದ್ದಾರೆ.

    ರೋಗ ಪೀಡಿತ ಪ್ರದೇಶಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸುವುದು. ಪರಿಸ್ಥಿತಿ ಹದಗೆಡುತ್ತಿದ್ದಂತೆ ನಿವೃತ್ತ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನೂ ತೆಗೆದುಕೊಳ್ಳಲಾಗುತ್ತಿದೆ. ಈ ಸಮಯದಲ್ಲಿ ಭಾರೀ ಮಳೆಯು ವೈದ್ಯಕೀಯ ಸೇವೆಗಳು ಮತ್ತು ಸುರಕ್ಷಿತ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ. ಕಾಲರಾಗೆ ಮರಣ ಪ್ರಮಾಣವು ಸಾಮಾನ್ಯವಾಗಿ ಶೇಕಡಾ ಒಂದಕ್ಕಿಂತ ಕಡಿಮೆಯಿರುತ್ತದೆ. ಆದರೆ ಜಾಂಬಿಯಾದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಆ ದರವು ಆತಂಕಕಾರಿಯಾಗಿ ನಾಲ್ಕು ಪ್ರತಿಶತಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ.

    ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts