More

    ವಾರಭವಿಷ್ಯ: ಈ ರಾಶಿಯವರುಮೊದಲು ನಿಮ್ಮಮನಸ್ಸಿನ ಉದ್ವೇಗ ಕಡಿಮೆ ಆಗಿ ನಿಮ್ಮ ಕಾರ್ಯಗಳು ಮುಂದೆ ಸಾಗುತ್ತವೆ

    ಮೇಷ: ವಸಂತ ಋತುವಿನ 8ನೇ ತಾರೀಕಿನಿಂದ ವೈಶಾಖ ಮಾಸ ಆರಂಭ. ಚೈತ್ರ ಮಾಸದಲ್ಲಿ ವಸಂತ ಋತುವಿನ ರಾಮ ನವರಾತ್ರಿ ಕಳೆದು ವೈಶಾಖ ಮಾಸದಲ್ಲಿ ರಾಕ್ಷಸ ಸಂಹಾರ ಆಗಿದ್ದು ಶ್ರೀ ನರಸಿಂಹ ದೇವರೇ ಬಂದು ನಮ್ಮನ್ನೆಲ್ಲ ಕಾಯುತ್ತಾನೆ. ಕುಜನ ಅಧಿಪತಿ ಇರುವ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಶತ್ರುಗಳ ಹುಟ್ಟನ್ನು ಅಡಗಿಸಿ ಕ್ಷೇಮ, ಅಭಿವೃದ್ಧಿ ಹೊಂದಿ ಮನೋವಂಚಿತ ಫಲ ಕರುಣಿಸಿ ಕಾಪಾಡುತ್ತಾನೆ.

    ವೃಷಭ: ಶುಕ್ರ ಸ್ವಕ್ಷೇತ್ರದಲ್ಲಿ ಇರುವುದು ಒಳ್ಳೆಯ ಯೋಗವೇ ಸರಿ. ಯಾವ ಮನುಷ್ಯನು ಅಲೆಯಂತೆ ಬರುವ ಕೆಟ್ಟ ಆಲೋಚನೆಗಳನ್ನು ತಡೆದು ಯಾರಿಗೂ ಕೆಟ್ಟದ್ದನ್ನು ಮಾಡದೇ ಮುಂದೆ ಸಾಗು ತ್ತಾನೋ ಅಂಥವರನ್ನು ಗುರುವು ಕಾಪಾಡುತ್ತಾನೆ. ಶುಕ್ರನಿಗಾಗಿ ಚಂಡಿ ಪ್ರಾರ್ಥನೆ ಮಾಡಿ.

    ಮಿಥುನ: ಗುರು ಕಟಾಕ್ಷ ಅಷ್ಟಾಗಿ ಇಲ್ಲದಿದ್ದರೂ, ಶನಿಯು 9ನೇ ಮನೆಯಲ್ಲಿ ಇರುವುದರಿಂದ ನಿಮ್ಮನ್ನು ಕೈ ಹಿಡಿದು ನಡೆಸಲು ಸಾಧ್ಯವಾಗುತ್ತದೆ. ಸಾಕ್ಷಾತ್ ಶಿವನಿಗೆ ತಂದೆ ಗುರು ವಾದ ತಮಿಳುನಾಡಿನ ಸ್ವಾಮಿ ಮಲೈ ಸುಬ್ರಹ್ಮಣಿಯನ್ನು ಅರ್ಚಿಸಿ ದರ್ಶಿಸಿ. ಮೊದಲು ನಿಮ್ಮಮನಸ್ಸಿನ ಉದ್ವೇಗ ಕಡಿಮೆ ಆಗಿ ನಿಮ್ಮ ಕಾರ್ಯಗಳು ಮುಂದೆ ಸಾಗುತ್ತವೆ.

    ಕಟಕ: ಏಕಾದಶಕ್ಕೆ ಗುರು ಬಂದು, ಏಣಿಯನ್ನು ಹತ್ತುವುದು ನಿಮ್ಮ ಕೆಲಸ. ಆಕಾಶ ಮುಟ್ಟಿಸುವುದು ದೇವರ ಕೆಲಸ. ಉಮಾ ಮಹೇಶ್ವರನ ಪ್ರಾರ್ಥನೆ ಇರಲಿ. ಅಂಬಾ ಭವಾನಿ ಅಷ್ಟೋತ್ತರ ಪಠಿಸಿ. ಭಾಗ್ಯಶಾಲಿಗಳಾಗಿ ಬದುಕಿ. ಆರೋಗ್ಯವು ಸುಧಾರಿಸುತ್ತದೆ.

    ಸಿಂಹ: ಕರ್ಮ ಸ್ಥಾನದಲ್ಲಿ ಗುರು ಇದ್ದು ನಿಮಗೆ ಕೆಡುಕನ್ನು ಉಂಟು ಮಾಡಿದರೆ ಅವರನ್ನು ಶಿಕ್ಷಿಸಿ, ನಿಮಗೆ ವರವನ್ನು ಕೊಡುತ್ತಾನೆ. ಸಪ್ತಮದಲ್ಲಿ ಶನಿ ಅಷ್ಟಮ ರಾಹು ಕೂಡಿದ್ದರಿಂದ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ನೀವು ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾಗರಾಜನನ್ನು ಪ್ರಾರ್ಥಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ.

    ಕನ್ಯಾ: ಕುಜ ರಾಹು ಸಪ್ತಮದಲ್ಲಿ ಇರುವುದು. ನಾಗರಾಜನ ಪ್ರಾರ್ಥನೆ ಇರಲಿ. ಭುಜಂಗೇಶನನ್ನು ಪ್ರಾರ್ಥಿಸಿ. 9ರ ಗುರು ಸಮಸ್ತ ಸತ್ಪಲಗಳನ್ನು ಕೊಟ್ಟು ರಕ್ಷಣೆಯನ್ನು ಕೊಟ್ಟು ಮನಸ್ಸಿಗೆ ಉಲ್ಲಾಸವನ್ನು ಕೊಟ್ಟು ನಿಮ್ಮನ್ನು ಸುರಕ್ಷಿತವಾಗಿ ರಕ್ಷಿಸಿ ಲಾಭ ಕೀರ್ತಿಯನ್ನು ಕೊಟ್ಟು ಆರೋಗ್ಯವನ್ನು ಸಮೃದ್ಧಿಯಾಗಿ ಕೊಡುತ್ತಾನೆ. ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಕನ್ಯಾ ರಾಶಿ ಅಧಿಪತಿ ಮಹಾವಿಷ್ಣುವನ್ನು ಪೂಜಿಸಿ, ಪ್ರಾರ್ಥಿಸಿ.

    ತುಲಾ: ತುಲಾ ರಾಶಿಯವರು ಹೆದರುವುದು ಬೇಡ. ದೈವ ಪ್ರಾರ್ಥನೆ ಇರಲಿ. ರಕ್ಷಣೆ ಕೊಡುವವನು ದೈವ ಒಬ್ಬನೇ. ನಿಮ್ಮನ್ನು ಆತಂಕಕ್ಕೆ ಈಡು ಮಾಡಿ ಪರೀಕ್ಷಿಸಬಹುದು. ಸ್ವಕ್ಷೇತ್ರದಲ್ಲಿ ಶನಿ ಕೂತಿರುವುದರಿಂದ ಕೆಡುಕನ್ನು ಮಾಡನು. ಮಹಾ ಮಾಯೆಯ ನಿಮಗೆ ಇಷ್ಟ ಬಂದ ಸ್ವರೂಪ ಪೂಜಿಸಿ. ಶುಭವಾದ ಕಾಲ ಪಡೆಯಬಹುದು.

    ವೃಶ್ಚಿಕ: ಸಪ್ತಮದಲ್ಲಿ ಗುರುವು ಸುಖ ಸಂತೋಷ ನೀಡುವ ಕಾಲ. ಪೂರ್ವ ಪುಣ್ಯವು ದೊರಕಿ ನಿಮ್ಮ ಕಾಲವು ಅತ್ಯಂತ ಒಳ್ಳೆಯದಾಗುತ್ತದೆ. ವೃಶ್ಚಿಕ ರಾಶಿಗೆ ಅಧಿಪತಿ ಅಂಗಾರಕ. ಗುರು ಅಷ್ಟೋತ್ತರವನ್ನೂ ಪಠಿಸಿ. ಸಾಧ್ಯವಾದರೆ ತಮಿಳುನಾಡಿನ ಗುರು ದೇವಸ್ಥಾನವನ್ನು, ಶನಿಯನ್ನು ಕಂಡು ಬಂದರೆ ಒಳ್ಳೆಯ ಫಲ ಜಾಸ್ತಿ ಆಗಿ ಹಣದ ಹೊಳೆಯು ಹರಿದು ಬಂದು, ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ.

    ಧನಸ್ಸು: ಗುರುವು ಷಷ್ಟಕ್ಕೆ ಹೋಗಿದ್ದಾರೆ. ಶುಕ್ರನ ಮನೆಯಲ್ಲಿ ಇರುವುದರಿಂದ ಯಾವುದೇ ಕೆಟ್ಟ ಫಲ ಕೊಡನು. ಗುರು ಚರಿತ್ರೆಯ ಒಂದು ಅಧ್ಯಾಯವನ್ನು ಓದಿ ನಿಮ್ಮ ಸಂರಕ್ಷಣೆ ನೀವೇ ಮಾಡಿಕೊಳ್ಳಬೇಕು. ಕೀರ್ತಿಯನ್ನು ಅತಿಶಯವಾಗಿ ಕೊಟ್ಟು ಶಾಂತಿ ಸಮಾಧಾನದಿಂದ ಒಳ್ಳೆಯ ಕೆಲಸ ಮಾಡಿಸುತ್ತಾನೆ.

    ಮಕರ: ಪಂಚಮ ಗುರುವು ಅಷ್ಟ ಯೋಗಗಳನ್ನು ಪಡೆಯುವ ಕಾಲ. ಮಕರ ರಾಶಿಯವರು ಈ ಕಾಲವನ್ನು ಸರಿಯಾಗಿ ಉಪಯೋಗಿಸಿಕೊಂಡು ನಿಮ್ಮ ಕುಲ ಗುರುಗಳನ್ನು ಅರ್ಚಿಸಿ. ಮಂತ್ರಾಲಯ ರಾಘವೇಂದ್ರ ಸ್ವಾಮಿಯನ್ನು ಪೂಜಿಸಿದರೆ ಏನನ್ನು ಬೇಕಾದರೂ ಪಡೆಯಬಹುದು. ಹೆಜ್ಜೆ ನಮಸ್ಕಾರ ಮಾಡಿದರೆ ಶೀಘ್ರದಲ್ಲಿ ಮನೋಕಾಮನೆ ಈಡೇರುತ್ತದೆ, ಆರೋಗ್ಯ ವೃದ್ಧಿಸುತ್ತದೆ.

    ಕುಂಭ: ಶನಿ ಸ್ವಕ್ಷೇತ್ರದಲ್ಲಿದ್ದು ಗುರು ಚತುರ್ಥಕ್ಕೆ ಹೋಗಿದ್ದರೂ ಗುರು ತಂಪಾದ ಗಾಳಿಯನ್ನು ಬೀಸಿ ನಿಮ್ಮನ್ನು ಜೋಪಾನವಾಗಿ ಗಿಡದ ನೆರಳಲ್ಲಿ ಇಟ್ಟು ತಂಗಾಳಿಯನ್ನು ಬೀಸಿ ಕೆಲಸ ಕೊಟ್ಟು ಅದನ್ನು ಮಾಡುವ ಮನಸ್ಸನ್ನು ಕೊಟ್ಟು ಉತ್ತೇಜನ ನೀಡುತ್ತಾನೆ. ಲೋಕಕ್ಕೆ ಗುರುವಾದ ಸಂಭಾಷಾದ ಶಿವನನ್ನು ಪ್ರಾರ್ಥಿಸಿ. ತಂಜಾವೂರಿನಲ್ಲಿ ನೆಲೆಸಿರುವ ಬೃಹದೀಶ್ವರನನ್ನು ಪ್ರಾರ್ಥಿಸಿ. ಒಳ್ಳೆಯದಾಗುತ್ತದೆ.

    ಮೀನ: ಮೀನ ರಾಶಿ ಅಧಿಪತಿ ಗುರು ತೃತೀಯಕ್ಕೆ ಬಂದು ಶುಕ್ರನ ಮನೆಯಲ್ಲಿ ಇದ್ದಾನೆ. ದೇವರು ಏನು ಮಾಡಿದರೂ ಒಳ್ಳೆಯದಕ್ಕೆ. ನಮ್ಮನ್ನು ಕಾಪಡಲೆಂದೇ ತೊಂದರೆಗಳನ್ನು ನೀಡಿ ನಂತರ ಸಂರಕ್ಷಿಸುತ್ತಾನೆ. ನಿಮ್ಮ ಕುಲ ಗುರುಗಳನ್ನು ಪೂಜಿಸಿ. ಗುರು ನರಸಿಂಹನನ್ನು ಅರ್ಚಿಸಿದರೆ ಆರೋಗ್ಯ ವೃದ್ಧಿಸಿ, ಒಳ್ಳೆಯ ಜೀವನವನ್ನು ನಡೆಸಿಕೊಂಡು ಹೋಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts