More

    ವಿಜಯ್ ಬಳಿಕ ಮತ್ತೊಬ್ಬ ಸ್ಟಾರ್​ ಹೀರೋ ರಾಜಕೀಯಕ್ಕೆ ಎಂಟ್ರಿ? ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ?

    ಚೆನ್ನೈ: ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ತಮಿಳಗ ವೆಟ್ರಿ ಕಳಗಂ ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ. ದಳಪತಿ ವಿಜಯ್ ಅವರು ರಾಜಕೀಯಕ್ಕೆ ಧುಮುಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ತಮಿಳುನಾಡಿನ ಸಿನಿಮಾ ಹಾಗೂ ರಾಜಕೀಯದಲ್ಲಿ ಹೊಸ ತಿರುವು ತರಲಿದೆ ಎಂದು ಭಾವಿಸಲಾಗಿದೆ.

    ಇದನ್ನೂ ಓದಿ:ಹೃತಿಕ್ ರೋಷನ್-ದೀಪಿಕಾ ಚುಂಬನ: ‘ಫೈಟರ್’ ವಿರುದ್ಧ ಪ್ರಕರಣ ದಾಖಲಿಸಿದ ಅಧಿಕಾರಿ

    ವಿಜಯ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ಅವರ ಪಕ್ಷವು 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ವರದಿಯಾಗಿದೆ.

    ನಟ ವಿಜಯ್ ಹಾದಿಯಲ್ಲೇ ಮತ್ತೊಬ್ಬ ನಟ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಪ್ರಚಾರ ಜೋರಾಗಿದೆ. ಸದ್ಯದಲ್ಲೇ ನಟ ವಿಶಾಲ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ವಿಶಾಲ್ ಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪಕ್ಷ ರಚನೆಗೆ ತಳಹದಿಯ ತಯಾರಿ ನಡೆದಿದೆಯಂತೆ ಎಂದು ಸುದ್ದಿ ಹಬ್ಬಿದೆ.

    2026ರ ವಿಧಾನಸಭಾ ಚುನಾವಣೆಯನ್ನು ರಾಜಕೀಯ ಪ್ರವೇಶದ ಗುರಿ ಎಂದು ಭಾರೀ ಪ್ರಚಾರ ಮಾಡಲಾಗುತ್ತಿದೆ. ವಿಶಾಲ್ ರಾಜಕೀಯ ಪ್ರವೇಶದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ತಮಿಳುನಾಡು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಶೀಘ್ರದಲ್ಲೇ ಅವರು ತಮ್ಮ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

    ಏತನ್ಮಧ್ಯೆ, ವಿಶಾಲ್ ಹಲವು ವರ್ಷಗಳಿಂದ ತಮಿಳುನಾಡು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಹಿಂದೆ ವಿಶಾಲ್ ಕೂಡ ಚೆನ್ನೈ ಆರ್ ಕೆ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾರಣಾಂತರಗಳಿಂದ ನಾಮಪತ್ರ ತಿರಸ್ಕೃತಗೊಂಡಿತ್ತು. ವಿಶಾಲ್ ಸದ್ಯ ‘ವಿಶಾಲ್ ಪೀಪಲ್ಸ್ ಹೆಲ್ತ್ ಮೂಮೆಂಟ್’ ಹೆಸರಿನಲ್ಲಿ ಜನರ ಸೇವೆ ಮಾಡುತ್ತಿರುವುದು ಗೊತ್ತೇ ಇದೆ.

    ಚೆನ್ನೈನಲ್ಲಿ ಪ್ರವಾಹ ಮತ್ತು ಇತರ ವಿಪತ್ತುಗಳ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು. ಆದರೆ, ವಿಶಾಲ್ ಈ ಹಿಂದೆ ಒಮ್ಮೆ ಹೇಳಿದ್ದರು.. ‘ನಾನು ರಾಜಕೀಯಕ್ಕೆ ಬರುವುದು ನಿಶ್ಚಿತ. ಆದರೆ ನನ್ನ ರಾಜಕೀಯ ಪ್ರವೇಶ ಯಾವಾಗ ಎಂದು ಈಗಲೇ ಹೇಳಲಾರೆ. ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಕಾಲಿಡುತ್ತೇನೆ ಎಂದು ವಿಶಾಲ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅವರ ರಾಜಕೀಯ ಪ್ರವೇಶ ಖಚಿತವಾಗಿದೆ.

    5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts