More

    ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಜಪಾನ್​ನ ಮೊದಲ ಖಾಸಗಿ ರಾಕೆಟ್..!

    ಟೋಕಿಯೋ: ಜಪಾನ್‌ನ ಮೊದಲ ಖಾಸಗಿ ರಾಕೆಟ್ ಉಡಾವಣೆ ವಿಫಲವಾಗಿದೆ. ರಾಕೆಟ್​ ಲಾಂಚ್​ಪ್ಯಾಡ್​ಗೆ ಸಮೀಪದಲ್ಲೇ ಸ್ಫೋಟಿಸಿದೆ. ಇದರೊಂದಿಗೆ ಖಾಸಗಿ ರಾಕೆಟ್​ ಸಹಾಯದೊಂದಿಗೆ ಉಪಗ್ರಹಗಳನ್ನು ವೇಗವಾಗಿ ಕಕ್ಷೆಗೆ ಸೇರಿಸುವ ಆ ದೇಶದ ಕನಸು ಕನಸಾಗೇ ಉಳಿಯಿತು.

    ಇದನ್ನೂ ಓದಿ:  VIDEO | ರಸ್ತೆ ಬದಿಯಲ್ಲಿ ಗ್ರಾಹಕರಿಗೆ ಐಸ್ ಗೋಲಾ ವಿತರಿಸಿದ ಆಯೇಶಾ; ವೀಕ್ಷಿಸಲು ಹರಿದು ಬಂದ ಜನರ ದಂಡು

    ಪಶ್ಚಿಮ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನ ಲಾಂಚ್ ಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಸುಮಾರು 60 ಅಡಿ ಎತ್ತರದ ಕೈರೋಸ್ ರಾಕೆಟ್ ಸಣ್ಣ ಸರ್ಕಾರಿ ಉಡಾವಣಾ ಉಪಗ್ರಹವನ್ನು ಹೊತ್ತು ಆಕಾಶಕ್ಕೆ ಹಾರಿತು. ಆದರೆ, ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಂಡು ಗಾಳಿಯಲ್ಲಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು.

    ರಾಕೆಟ್​ನ ಚೂರುಗಳು ಸುತ್ತಲಿನ ಪ್ರದೇಶದಲ್ಲಿ ಬಿದ್ದವು. ಸ್ಫೋಟದ ಪರಿಣಾಮವಾಗಿ, ಇಡೀ ಲಾಂಚ್ ಪ್ಯಾಡ್ ಪ್ರದೇಶವು ಕಪ್ಪು ಹೊಗೆಯಿಂದ ಆವರಿಸಿತು.

    ಈ ರಾಕೆಟ್ ಉಡಾವಣೆಯಾದ 51 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸಬೇಕಿತ್ತು. ರಾಕೆಟ್ ಅನ್ನು ಟೋಕಿಯೋ ಮೂಲದ ಸ್ಪೇಸ್ ಒನ್ ನಿರ್ಮಿಸಿತ್ತು. ಈ ಉಡಾವಣೆ ಯಶಸ್ವಿಯಾಗಿದ್ದರೆ ಆ ದೇಶದಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಮೊದಲ ಖಾಸಗಿ ಕಂಪನಿ ಎಂಬ ದಾಖಲೆ ನಿರ್ಮಿಸಲಿತ್ತು.

    ಈ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, “ಕೈರೋಸ್ ರಾಕೆಟ್ ಉಡಾವಣೆ ಪ್ರಕ್ರಿಯೆಯು ಸುಗಮವಾಗಿ ಸಾಗಿದೆ. ಆದರೆ, ಉಡಾವಣೆಯನ್ನು ಮಧ್ಯದಲ್ಲಿ ನಿಲ್ಲಿಸಲು ನಾವು ಕ್ರಮ ಕೈಗೊಂಡಿದ್ದೇವೆ” ಎಂದು ಸ್ಪೇಸ್ ಒನ್ ಹೇಳಿದೆ, ಆದರೆ ಘಟನೆಗೆ ಕಾರಣಗಳನ್ನು ಬಹಿರಂಗಪಡಿಸಲಿಲ್ಲ.

    ವಿಶ್ವದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಉಪಗ್ರಹ ಉಡಾವಣಾ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಜಪಾನ್, ಇತ್ತೀಚಿನ ವೈಫಲ್ಯಗಳಿಂದ ನಿರಾಸೆ ಅನುಭವಿಸುವಂತಾಗಿದೆ.

    ಇನ್ನು ರಾಕೆಟ್ ದುರಂತಗಳು ಜಪಾನ್‌ಗೆ ಹೊಸದಲ್ಲ. ಕಳೆದ ವರ್ಷ ಎಸೋಲಾನ್ ಎಸ್ ರಾಕೆಟ್ ಕೂಡ ಉಡಾವಣೆಯಾದ 50 ಸೆಕೆಂಡುಗಳಲ್ಲಿ ಸ್ಫೋಟಗೊಂಡಿತು. ಮಾರ್ಚ್ ನಲ್ಲಿ ಎಚ್ ರಾಕೆಟ್ ಕೂಡ ಸ್ಫೋಟಗೊಂಡಿತ್ತು.

    ಆಸ್ಕರ್ 2024 ರಲ್ಲಿ ನಾಯಿ: ತಕ್ಷಣವೇ ಆಸ್ಕರ್ ನೀಡಿ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts