More

    VIDEO | ರಸ್ತೆ ಬದಿಯಲ್ಲಿ ಗ್ರಾಹಕರಿಗೆ ಐಸ್ ಗೋಲಾ ವಿತರಿಸಿದ ಆಯೇಶಾ; ವೀಕ್ಷಿಸಲು ಹರಿದು ಬಂದ ಜನರ ದಂಡು

    ಅಹಮದಾಬಾದ್: ಪ್ರಸ್ತುತ ಪ್ರಪಂಚದ ಅನೇಕ ಸ್ಥಳಗಳಲ್ಲಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ರೋಬೋಟ್‌ಗಳು ಅನೇಕ ರೆಸ್ಟೋರೆಂಟ್‌ಗಳಲ್ಲಿ ಆಹಾರ ನೀಡುತ್ತಿರುವುದು ಕಂಡುಬಂದಿದೆ. ಹಲವು ಕೆಲಸಗಳಿಗೆ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಈಗ ಅಹಮದಾಬಾದ್‌ನ ರೆಸ್ಟೋರೆಂಟ್‌ನಲ್ಲಿ ಅಂತಹದ್ದೇ ಒಂದು ದೃಶ್ಯ ಕಂಡುಬಂದಿದೆ.

    ಅಹಮದಾಬಾದ್‌ನ ಕೆಫೆಯೊಂದರಲ್ಲಿ ವೇಟರ್‌ಗಳ ಬದಲಿಗೆ ರೋಬೋಟ್‌ಗಳನ್ನು ಆಹಾರ ಬಡಿಸಲು ಬಳಸಲಾಗುತ್ತಿದೆ. ಈ ವಿಡಿಯೋದಲ್ಲಿ ರೋಬೋಟ್ ಸ್ಟ್ರೀಟ್ ಕೆಫೆಯಲ್ಲಿ ಗ್ರಾಹಕರಿಗೆ ಗೋಲಾ ನೀಡುತ್ತಿದೆ. ಇದನ್ನು ನೋಡಲು ಗ್ರಾಹಕರ ದಂಡೇ ಸೇರುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿನೂತನ ತಂತ್ರಜ್ಞಾನ ಜನರ ಮನದಲ್ಲಿ ಕುತೂಹಲ ಮೂಡಿಸುತ್ತಿದೆ.

    ಕೆಫೆಯಲ್ಲಿ ಕೆಲಸ ಮಾಡುತ್ತಿರುವ ಈ ರೋಬೋಟ್ ಹೆಸರು ಆಯೇಶಾ. ರೊಬೊಟಿಕ್ಸ್ ಕೆಫೆ ಆಯೇಶಾರನ್ನು ತನ್ನ ತಂಡದಲ್ಲಿ ಮಾಣಿಯಾಗಿ ಸೇರಿಸಿಕೊಂಡಿದೆ. ಈ ರೋಬೋಟ್ ಅನ್ನು ಮನೆ ಅಥವಾ ಕಚೇರಿಯಲ್ಲಿ ಬಳಸಿಕೊಳ್ಳಲು ಸುಮಾರು 1 ಲಕ್ಷ 35 ಸಾವಿರ ರೂ. ವೆಚ್ಚವಾಗುತ್ತದೆ. ಆಯೇಷಾ ಕಾರಣದಿಂದ ಈ ರೊಬೊಟಿಕ್ಸ್ ಕೆಫೆ ಸದಾ ಸುದ್ದಿಯಲ್ಲಿದೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಜನರ ಗಮನ ಸೆಳೆದಿದೆ.

    ಅಹಮದಾಬಾದ್‌ನ ಫುಡ್ ಬ್ಲಾಗರ್ ಒಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋಗೆ ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ರೋಬೋಟ್ ಐಸ್ ಗೋಲಾ ಪೂರೈಸುತ್ತಿದೆ ಎಂಬ ಶೀರ್ಷಿಕೆ ಕೊಡಲಾಗಿದೆ. ಐಸ್ ಗೋಲಾ 40 ರೂ ರಿಂದ ಪ್ರಾರಂಭವಾಗುವುದು. ಇದು ಸಂಪೂರ್ಣವಾಗಿ ಮೌಲ್ಯಯುತವಾಗಿದೆ. ಏಕೆಂದರೆ ಈ ತಿನಿಸು ಸ್ವಚ್ಛ ಮತ್ತು ಸಂಪೂರ್ಣ ಸ್ವಯಂಚಾಲಿತವಾಗಿದೆ.

    ಐಸ್ ಗೋಲಾ ಮಾಡಲು ಮೊದಲು ಹಾಲಿಗೆ ಚಾಕಲೇಟ್ ಸಿರಪ್ ಸೇರಿಸಿ ಮಿಕ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ನಂತರ ಈ ಮಿಶ್ರಣವನ್ನು ವಿಶೇಷ ಯಂತ್ರದಲ್ಲಿ ಇರಿಸಲಾಗುತ್ತದೆ. ಅದು ದ್ರವವನ್ನು ಐಸ್ ಆಗಿ ಪರಿವರ್ತಿಸುತ್ತದೆ. ನಂತರ ಇದನ್ನು ಚಿಕ್ಕ ಚಿಕ್ಕ ಪೀಸ್​​ ಆಗಿ ಒಡೆಯಲಾಗುತ್ತದೆ. ರುಚಿಯನ್ನು ಇನ್ನಷ್ಟು ಹೆಚ್ಚಿಸಲು, ಈ ಖಾದ್ಯವನ್ನು ಒಣ ಹಣ್ಣುಗಳು, ವರ್ಣರಂಜಿತ ಜೆಮ್ಸ್ ಮತ್ತು ಚಾಕೊಲೇಟ್ ಸಿರಪ್‌ನಿಂದ ಅಲಂಕರಿಸಲಾಗುತ್ತದೆ.

    ಶ್ವಾನ ಪ್ರಿಯರೇ ಗಮನಿಸಿ, ಈ ತಳಿಯ ನಾಯಿಗಳನ್ನು ಖರೀದಿಸೋ ಪ್ಲಾನ್ ಇದ್ದರೆ ಎಚ್ಚರ! ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ..

    ನೀರು ನಿರ್ವಹಣೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ; ಫಸ್ಟ್‌ ಪ್ಲೇಸ್‌ ಪಡೆದುಕೊಂಡ ರಾಜ್ಯ ಇದೇ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts