More

    ಶ್ವಾನ ಪ್ರಿಯರೇ ಗಮನಿಸಿ, ಈ ತಳಿಯ ನಾಯಿಗಳನ್ನು ಖರೀದಿಸೋ ಪ್ಲಾನ್ ಇದ್ದರೆ ಎಚ್ಚರ! ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ..

    ನವದೆಹಲಿ: ಬಹುತೇಕರು ಶ್ವಾನಗಳನ್ನು ಅಥವಾ ನಾಯಿಗಳನ್ನು ಸ್ನೇಹಿತರಂತೆ, ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಅವು ಸಹ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಸಂತೋಷದಲ್ಲಿ, ನೆಮ್ಮದಿಯಲ್ಲಿ ಭಾಗಿಯಾಗುತ್ತವೆ. ಆದರೆ ನಾಯಿಗಳು ನಮ್ಮ ನಿಷ್ಠಾವಂತ ಸಹಚರರಾಗಿದ್ದರೂ ಸಹ, ಕೆಲವು ತಳಿಗಳು ಬಹಳ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತವೆ. ಅವುಗಳ ಆ ಸ್ವಭಾವವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಯ್ದ ಆಕ್ರಮಣಕಾರಿ ನಾಯಿ ತಳಿಗಳನ್ನು ಬ್ಯಾನ್ ಮಾಡಲು ಕೇಂದ್ರ ಸೂಚಿಸಿದೆ.

    ಹೌದು, ರೋಟ್‌ವೀಲರ್, ಪಿಟ್‌ಬುಲ್, ಟೆರಿಯರ್, ವುಲ್ಫ್ಡಾಗ್ ಮತ್ತು ಮ್ಯಾಸ್ಟಿಫ್​​​​​ಗಳಂತಹ ಹಲವಾರು ತಳಿಯ ನಾಯಿಗಳನ್ನು ಸಾಕು ನಾಯಿಗಳಾಗಿ ಅಥವಾ ಇತರ ಉದ್ದೇಶಗಳಿಗಾಗಿ ಸಾಕುತ್ತಿದ್ದರೆ ಮಾನವ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದು, ಅವುಗಳ ಆಮದು, ಸಂತಾನೋತ್ಪತ್ತಿ ಮತ್ತು ಮಾರಾಟವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಕೋರಿದೆ. ಈ ನಿರ್ಬಂಧವು ಮಿಶ್ರ ಮತ್ತು ಕ್ರಾಸ್​​​ ಬ್ರೀಡ್​​​ಗೂ ವಿಸ್ತರಿಸಲಿದೆ. 

    ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ನಾಯಿ ಕಡಿತದ ಪ್ರಕರಣಗಳಲ್ಲಿ 40% ರಷ್ಟು ಪಿಟ್ ಬುಲ್ಸ್​​​​​ ಕಾರಣವಾಗಿವೆ. ಅದರ ಆಕ್ರಮಣಕಾರಿ ಸ್ವಭಾವದಿಂದಾಗಿ, ಅವುಗಳನ್ನು ಭಾರತ ಮತ್ತು ಇತರ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ.

    ಇನ್ನು ಹೆಸರೇ ಸೂಚಿಸುವಂತೆ, ವುಲ್ಫ್ಡಾಗ್ ತೋಳ ಮತ್ತು ನಾಯಿ ಎರಡರ ಗುಣಲಕ್ಷಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಅವುಗಳನ್ನು ಮನೆಯಲ್ಲಿ ಬೆಳೆಸುವುದು ಕಷ್ಟಕರ ಮತ್ತು ಅಪಾಯಕಾರಿ. ಅವು ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಮತ್ತು ಶಕ್ತಿಯುತವಾಗಿರುತ್ತವೆ ಮತ್ತು ಅದರ ಸ್ವಭಾವವನ್ನು ಯಾರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.

    ಇನ್ನು ಡೋಗೊ ಅರ್ಜೆಂಟಿನೋ, ನಿಯೋಪಾಲಿಟನ್ ಮ್ಯಾಸ್ಟಿಫ್, ಕೇನ್ ಕೊರ್ಸೊ, ಟೋಸಾ ಇನು, ಫಿಲಾ ಬ್ರೆಸಿಲಿರೊ ಅಂತಹ ನಾಯಿಗಳನ್ನು ಈಗಾಗಲೇ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಹ ನಿಷೇಧಿಸಲಾಗಿದೆ. 

    ವರುಣನ ಆರ್ಭಟದಿಂದಾಗಿ ಪಾಕಿಸ್ತಾನದಲ್ಲಿರುವ ದಿವಂಗತ ನಟ ದಿಲೀಪ್ ಕುಮಾರ್ ಪೂರ್ವಿಕರ ಮನೆಗೆ ಹಾನಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts