More

    ಶಿವಮೊಗ್ಗ ಕ್ಷೇತ್ರದ ಅಂತಿಮ ಕಣದಲ್ಲಿ 23 ಅಭ್ಯರ್ಥಿಗಳು

    ಶಿವಮೊಗ್ಗ: ಲೋಕಸಭಾ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ಸೋಮವಾರ ಮೂವರು ನಾಮಪತ್ರ ಹಿಂಪಡೆದಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 23 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ಸಂಖ್ಯೆ ದೃಷ್ಟಿಯಿಂದ ಗಮನಿಸಿದರೆ ಇದು ಸಾರ್ವತ್ರಿಕ ದಾಖಲೆ. ಮೇ 7ರ ಚುನಾವಣೆಯಲ್ಲಿ ಮೊದಲ ಬಾರಿಗೆ ಎರಡು ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ. 23 ಅಭ್ಯರ್ಥಿಗಳು ಹಾಗೂ ನೋಟಾ ಸೇರಿ ಒಟ್ಟು 24 ಹೆಸರುಗಳು ಎರಡು ಬ್ಯಾಲೆಟ್ ಯುನಿಟ್‌ನಲ್ಲಿ ಇರಲಿವೆ.
    ಒಟ್ಟು 27 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ವೇಳೆ ಆಮ್ ಆದ್ಮಿ ಪಾರ್ಟಿಯ ಸುಭಾನ್ ಖಾನ್ ನಾಮಪತ್ರ ತಿರಸ್ಕೃತವಾಗಿತ್ತು. 26 ಮಂದಿ ಕಣದಲ್ಲಿದ್ದರು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಎಚ್.ಶೇಖರಪ್ಪ, ಎಸ್.ಬಾಲಕೃಷ್ಣ ಭಟ್ ಹಾಗೂ ಬಿ.ಕೆ.ಶಶಿಕುಮಾರ ಗೌಡ ಸೋಮವಾರ ನಾಮಪತ್ರ ಹಿಂಪಡೆದರು.
    ಬಿಜೆಪಿ, ಕಾಂಗ್ರೆಸ್, ಕರ್ನಾಟಕ ರಾಷ್ಟ್ರ ಸಮಿತಿ, ಉತ್ತಮ ಪ್ರಜಾಕೀಯ ಪಾರ್ಟಿ, ಬಿಎಸ್‌ಪಿ, ವೈಇಪಿ ಪಾರ್ಟಿಯಿಂದ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣಾ ಆಯೋಗದಲ್ಲಿ ನೋಂದಣಿಯಾದ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಉಳಿದ 17 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ.
    ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಂತಿಮ ಕ್ಷಣದಲ್ಲಿ ನಾಮಪತ್ರ ಹಿಂಪಡೆಯಬಹುದೆಂಬ ಕೆಲವರ ಲೆಕ್ಕಾಚಾರ ಹುಸಿಯಾಯಿತು. ಅವರ ಉಮೇದುವಾರಿಕೆ ಇರುವುದರಿಂದ ಬಿಜೆಪಿಗೆ ಬಂಡಾಯದ ಬಿಸಿ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts