ಶಾಲೆಗಳ ಬೆಳವಣಿಗೆಗೆ ಸಮುದಾಯದ ಪಾತ್ರ ಮಹತ್ತರ : ಸಾಮೆತಡ್ಕದ ಶಿಕ್ಷಣ ತಜ್ಞ ದಿನೇಶ್ ಕಾಮತ್ ಅಭಿಪ್ರಾಯ

New Project (27)
Published on

ಕಡಬ: ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ಮಹತ್ವದ್ದು ಎಂದು ಶಿಕ್ಷಣ ತಜ್ಞ ದಿನೇಶ್ ಕಾಮತ್ ಹೇಳಿದರು.

ಸವಣೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಕ್ಲಸ್ಟರ್ ಸಿ.ಆರ್.ಪಿ.ಜಯಂತ ವೈ. ಡಿಜಿಟಲ್ ಕಲಿಕೆಯ ಸ್ಮಾರ್ಟ್ ಟಿ.ವಿ. ಉದ್ಘಾಟಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ರಫ್ ಜನತಾ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ ಅನ್ಸಾರ್ ಯೂತ್ ಕಮಿಟಿ ವತಿಯಿಂದ ಶಾಲೆಗೆ ಬೇಬಿ ಚೇರ್ ಕೊಡುಗೆ ಹಸ್ತಾಂತರಿಸಲಾಯಿತು. ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಟ್ರಸ್ಟಿ ಅಬ್ದುಲ್ ಖಾದರ್, ಸವಣೂರು ಗ್ರಾಪಂ ಸದಸ್ಯರಾದ ರಾಜೀವಿ ಶೆಟ್ಟಿ, ರಫೀಕ್ ಎಂ.ಎ., ಚಂದ್ರಾವತಿ ಸುಣ್ಣಾಜೆ, ಹಿರಿಯ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಎಸ್.ಎ.ಅಬ್ದುಲ್, ಸವಣೂರು ಪ್ರಾ.ಕೃ.ಪ.ಸ. ಸಂಘ ಸಿಇಒ ಚಂದ್ರಶೇಖರ ಪಿ., ಶ್ರೀರಾಮ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ವಿಜಯ ಈಶ್ವರ ಗೌಡ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು ಶುಭಹಾರೈಸಿದರು. ಮುಖ್ಯ ಶಿಕ್ಷಕ ಕೆ.ಪಿ.ನಿಂಗರಾಜು ಸ್ವಾಗತಿಸಿದರು. ಶಿಕ್ಷಕ ಓಬಲೇಶ್ ನಿರೂಪಿಸಿದರು. ಶಿಕ್ಷಕಿ ಶಶಿಕಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net