

ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ನಡೆಯಿತು.
ಮೂಡುಬಿದಿರೆ ಜೈನ್ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾರ್ಟಿನ್ ಡಿಸೋಜ ವರದಿ ವಾಚಿಸಿದರು.
ಪಿಟಿಎ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜಯಪ್ರಕಾಶ್ ಡಿಸೋಜ, ಎಂಪಿಟಿಎ ಅಧ್ಯಕ್ಷೆಯಾಗಿ ಸುಜಾತಾ ಆಯ್ಕೆಯಾದರು. ಸೀತಾರಾಮ ಬೇರಿಂಜ, ಸೀತಾಲಕ್ಷ್ಮೀ, ಜಯಪ್ರಕಾಶ್ ಡಿಸೋಜ ಅವರನ್ನು ಗೌರವಿಸಲಾಯಿತು. ಶಾಲಾ ಸಂಚಾಲಕ ಫಾ.ಬೇಸಿಲ್ ವಾಸ್, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ, ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷ ರಾಜೇಶ್ ಡಿಸೋಜ ಉಪಸ್ಥಿತರಿದ್ದರು. ಸುನಿತಾ ಕ್ರಾಸ್ತಾ ಸ್ವಾಗತಿಸಿದರು. ನಿಶಾ ವೀಣಾ ವಂದಿಸಿದರು. ಜೆಸಿಂತಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.