ಸೋಲಿನ ಭಯದ ನಡುವೆ ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದಾರೆ; ಪ್ರತಾಪ್ ಸಿಂಹ

Tweet War
Published on

ಮೈಸೂರು: ವರುಣಾ ಕ್ಷೇತ್ರದಲ್ಲಿ ಈ ಬಾರಿ ದೊಡ್ಡ ಸಂಚಲನ ಕಾಣಿಸುತ್ತಿದೆ. 15 ವರ್ಷಗಳಿಂದ ಇಲ್ಲಿನ ಜನರು ಒಳ್ಳೆಯ ಅಭ್ಯರ್ಥಿ ಕೇಳಿದ್ದರು. ಇದೀಗ ಕಾಂಗ್ರೆಸ್ ಒಳ್ಳೆ ಅಭ್ಯರ್ಥಿ ಇಲ್ಲ ಎಂದೇ ಎರಡು ಬಾರಿ ಅಪ್ಪ, ಒಂದು‌ ಬಾರಿ ಮಗ, ಈಗ ಉತ್ತರಾಧಿಕಾರಿಯಾಗಿ ಮೊಮ್ಮಗನನ್ನು ಕರೆತಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಜನರು ಸೋಮಣ್ಣ ಬೆನ್ನಿಗಿದ್ದಾರೆ!

ವಿ.ಸೋಮಣ್ಣ ಹೆಸರು ಘೋಷಣೆ ಆಗುತ್ತಿದ್ದಂತೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುಂಚಿತವಾಗಿಯೇ ಸಿದ್ದರಾಮಯ್ಯ ಬಂದು ಕುಳಿತಿದ್ದಾರೆ. ಎಲ್ಲಾ ಜಾತಿಯ ಜನರು ಸೋಮಣ್ಣ ಬೆನ್ನಿಗಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಬೆಂಗಳೂರಿನಿಂದ ರಿವರ್ಸ್ ಗೇರ್​​​ನಲ್ಲಿ ಇಲ್ಲಿಗೆ ಬಂದಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದಾರೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ನಿಮ್ಮ ಹೆಸರಲ್ಲಿ 30-40 ಜ‌ನರನ್ನು ಗೆಲ್ಲಿಸಬೇಕು. ಅವ್ರನ್ನು ಗೆಲ್ಲಿಸುವ ವಿಚಾರ ಪಕ್ಕಕ್ಕಿರಲಿ, ನೀವು ಗೆಲ್ಲುತ್ತೀರೋ ಇಲ್ಲವೋ ಎಂಬ ಭಯ ನಿಮಗೆ ಕಾಡುತ್ತಿದೆ. ಅದಕ್ಕಾಗಿ ಮರಳಿ ವರುಣ ಕ್ಷೇತ್ರಕ್ಕೆ ಬಂದಿದ್ದೀರಿ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಂತೆ ಈಗ ವರುಣ ಕ್ಷೇತ್ರ ನಿಮಗೆ ಕಾಣಿಸುತ್ತಿದೆ ಎಂದು ಸಿದ್ದರಾಮಯ್ಯ ಅವರನ್ನು ಪ್ರತಾಪ್ ಸಿಂಹ ಕುಟುಕಿದರು.

ವರುಣದ ಜನ ಪಾಠ ಕಲಿಸಬೇಕು!

ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಣುತ್ತಿದ್ದು, ಏನೇನೋ ಮಾತನಾಡುತ್ತಿದ್ದಾರೆ. ಬಸವ ಅನುಯಾಯಿಗಳ ಬಗ್ಗೆ ತುಚ್ಛವಾಗಿ ಮಾತನಾಡಲು ಶುರು ಮಾಡಿದ್ದಾರೆ. ಇದು ಸಿದ್ದರಾಮಯ್ಯಗೆ ಬೇರೆ ಸಮುದಾಯಗಳ ಬಗ್ಗೆ ಇರುವ ಭಾವನೆ ತೋರಿಸುತ್ತೆ. ಇಂತಹ ದುರಂಹಕಾರಿ ಸಿದ್ದರಾಮಯ್ಯಗೆ ವರುಣ ಜನ ಪಾಠ ಕಲಿಸಬೇಕು. ಅದ್ದೂರಿ ದಸರಾ ಹಬ್ಬಕ್ಕೆ ಮತ್ತೊಂದು ದಸರಾ ಹುಟ್ಟು ಹಾಕಿದ ವ್ಯಕ್ತಿಗೆ ಪಾಠ ಕಲಿಸುವ ಕಾಲ ಬಂದಿದೆ. ಅದಕ್ಕಾಗಿ ಸೋಮಣ್ಣ ಅವರನ್ನು ಕಳುಹಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net