More

    ಆರ್​​ಎಸ್​​ಎಸ್​​ನವರು ನನ್ನ ಮೇಲೆ ನಿಗಾ ವಹಿಸಿ ಯಾವುದೇ ಪ್ರಯೋಜನವಿಲ್ಲ; ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ನನ್ನದು ಕಾನೂನು ಬಾಹಿರ ಚಲನವಲನ ಇಲ್ಲವೇ ಇಲ್ಲ. ನಾಗಪುರ ತಂಡದವರು ನನ್ನ ಮೇಲೆ ನಿಗಾ ವಹಿಸಿದರೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ನಿಗಾ ವಹಿಸಲು ನಾಗಪುರ, ಗುಜರಾತ್ ದಿಂದ ಆರ್​ಎಸ್​ಎಸ್, ಬಿಜೆಪಿ ತಂಡದವರು ಬಂದಿದ್ದಾರೆಯೇ ಎಂಬುದನ್ನು ನಾನು ಖಚಿತ ಮಾಡಲು ಹೋಗುವುದಿಲ್ಲ. ಆಕಸ್ಮಾತ್ ಬಂದಿದ್ದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

    ಇದನ್ನೂ ಓದಿ: ‘ಜಯವಾಹಿನಿ’ ಏರಿ ರೋಡ್​ ಶೋ ಆರಂಭಿಸಿದ ಸಿಎಂ ಬೊಮ್ಮಾಯಿ; ಇಂದಿನಿಂದ ಬಿಜೆಪಿ ರಥಯಾತ್ರೆ

    ಸ್ಥಳೀಯರು ನನ್ನ ಜತೆ ಇದ್ದಾರೆ

    ಹೊರಗಿನವರು ಯಾರೇ ಬಂದರೂ ಇಲ್ಲಿಯ ಪರಿಸ್ಥಿತಿ ತಿಳಿದುಕೊಳ್ಳುವಾಗ ಪೂರ್ವ ಚುನಾವಣೆ ಮುಗಿದಿರುತ್ತದೆ. ಸ್ಥಳಿಯರು ನನ್ನ ಜತೆ ಇದ್ದಾರೆ ಎಂಬ ವಿಶ್ವಾಸವಿದೆ. ನಾಗಪುರದಲ್ಲಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಕೆ‌ ಸೋತರು ಎಂದು ಪ್ರಶ್ನಿಸಿದರು.

    ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ನಡೆಯುತ್ತಿರುವ ನಕಾರಾತ್ಮಕ ಅಭಿಯಾನ ನನ್ನ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲವರು ಮನೆಯಲ್ಲಿ ಕುಳಿತು ಏನೇನೂ ಬರೆಯುತ್ತಾ ಇರುತ್ತಾರೆ. ಅದೆಲ್ಲ ಪರಿಣಾಮ ಬೀರುವುದಿಲ್ಲ. ಸ್ಥಳೀಯ ಆಗುಹೋಗು ನನಗೆ ತಿಳಿದಿದೆ. ಚುನಾವಣೆಯಲ್ಲಿ ಇಂಥಾ ಅಭಿಯಾನವನ್ನು ಈಗಾಗಲೇ ಎದುರಿಸಿದ್ದೇವೆ ಎಂದರು.

    ಇದನ್ನೂ ಓದಿ: ರಮ್ಯಾ ಅವರನ್ನು ಪಕ್ಷಕ್ಕೆ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ; ಕಾಂಗ್ರೆಸ್​ ನಾಯಕಿಗೆ ಟಾಂಗ್ ಕೊಟ್ಟ ಆರ್​​.ಅಶೋಕ್

    ಅನ್ಯಾಯದ ಬಗ್ಗೆ ಚರ್ಚಿಸಿದ್ದೇನೆ

    ಕೂಡಲಸಂಗಮಕ್ಕೆ ಹೋಗುವ ಮಾರ್ಗಮಧ್ಯೆ ರಾಹುಲ್ ಗಾಂಧಿ ಹುಬ್ಬಳ್ಳಿ ಗೆ ಬಂದಿದ್ದರು. ಅವರನ್ನು ಭೇಟಿ ಮಾಡಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದೇನೆ. ಲಿಂಗಾಯತ ನಾಯಕರಿಗೆ ಬಿಜೆಪಿಯಲ್ಲಿ ಅನ್ಯಾಯ, ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಕಾರಣವಾದ ಅಂಶಗಳು, ಪಕ್ಷ ಸಂಘಟನೆ, ಪಕ್ಷದಲ್ಲಿ ಲಿಂಗಾಯಿತರಿಗೆ ಸೂಕ್ತ ಸ್ಥಾನಮಾನದ ಕುರಿತು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ನಲ್ಲಿ ಐವತ್ತಕ್ಕೂ ಹೆಚ್ಚು ಲಿಂಗಾಯಿತರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಲಿಂಗಾಯಿತರ ಮತಗಳ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್​ಗೆ ಬರಲಿವೆ. ಅವಶ್ಯಕತೆ ಉಂಟಾದರೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts