

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಪ್ರಮೋದ್ ಶೆಟ್ಟಿ ಭಿನ್ನ ಪಾತ್ರಗಳ ಜತೆಗೆ ಅಷ್ಟೇ ವಿಭಿನ್ನ ಸಿನಿಮಾ ಟೈಟಲ್ಗಳಿಂದಲೂ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ "ಲಾಫಿಂಗ್ ಬುದ್ಧ', "ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಹಾಗೂ "ಶಭಾಷ್ ಬಡ್ಡಿಮಗ್ನೆ' ಚಿತ್ರಗಳಲ್ಲಿ ಪ್ರಮೋದ್ ನಾಯಕನಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ರಕ್ಷಿತ್ ಶೆಟ್ಟಿ "ಶಭಾಷ್ ಬಡ್ಡಿಮಗ್ನೆ' ಚಿತ್ರದ ಮೊದಲ ನೋಟ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಬಿ.ಎಸ್. ರಾಜಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಸಂಪೂರ್ಣ ಮಾತಿನ ಭಾಗ ಹಾಗೂ ಹಾಡೊಂದರ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ : 500 ಕೋಟಿ ಕ್ಲಬ್ ಸೇರಿದ ಗದರ್-2; ಪಠಾಣ್ ದಾಖಲೆ ಉಡೀಸ್!
ಚಿತ್ರದಲ್ಲಿ ಪ್ರಮೋದ್ ಶೆಟ್ಟಿಗೆ ಆದ್ಯ ಪ್ರಿಯಾ ನಾಯಕಿಯಾಗಿದ್ದು, ಸಾಮ್ರಾಟ್ ಶೆಟ್ಟಿ, ಕಾವ್ಯ ರಮೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ಶಂಕರ್ ಅಶ್ವತ್ಥ್, ಪ್ರಕಾಶ್ ತುಮ್ಮಿನಾಡು, ಮೂಗು ಸುರೇಶ್, ರವಿತೇಜ, ದರ್ಶನ್ ಶೆಟ್ಟಿ, ಶೋಭ ಪ್ರಮುಖ ತಾರಾಗಣದಲ್ಲಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ, ಎಸ್.ಪಿ.ಭೂಪತಿ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ ಚಿತ್ರಕ್ಕಿರಲಿದೆ. ವರ್ಷದಂತ್ಯಕ್ಕೆ "ಶಭಾಷ್ ಬಡ್ಡಿಮಗ್ನೆ' ರಿಲೀಸ್ ಆಗುವ ನಿರೀೆಯಿದೆ.