ರಾಯರ ಸನ್ನಿಧಿಯಲ್ಲಿ ಚಿನ್ನದ ಮಲ್ಲಿಗೆ ಹೂವು ; ಅಣ್ಣಾವ್ರ ಕುಟುಂಬದ ಕುಡಿ ಷಣ್ಮುಖ ನಟಿಸುತ್ತಿರುವ ಮೊದಲ ಚಿತ್ರ

Chinnada Mallige Hoove (5)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಡಾ. ರಾಜಕುಮಾರ್​ ಕುಟುಂಬದ ಮತ್ತೊಂದು ಕುಡಿ ಇದೀಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ರೆಡಿಯಾಗಿದೆ. ಅಣ್ಣಾವ್ರ ಪುತ್ರಿ ಶ್ರೀಮತಿ ಲಕ್ಷ್ಮಿ ಗೋವಿಂದರಾಜು ಮತ್ತು ಎಸ್​.ಎ. ಗೋವಿಂದರಾಜು ದಂಪತಿ ಮಗ ಷಣ್ಮುಖ ಗೋವಿಂದ ಇದೀಗ ಸ್ಯಾಂಡಲ್​ವುಡ್​ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಚಿತ್ರಕ್ಕೆ "ಚಿನ್ನದ ಮಲ್ಲಿಗೆ ಹೂವೆ' ಎಂದು ಟೈಟಲ್​ ಇಡಲಾಗಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಮಂತ್ರಾಲಯದ ಗುರು ರಾವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಬಳಿಕ ಸ್ಕ್ರಿಪ್ಟ್​ ಪೂಜೆ ನೆರವೇರಿಸಿದೆ. ಪೂಜೆಯಲ್ಲಿ ಲಕ್ಷ್ಮಿ ಗೋವಿಂದರಾಜು, ಗೋವಿಂದರಾಜು, ನಾಯಕ ಷಣ್ಮುಖ, ನಿರ್ಮಾಪಕರಾದ ಶ್ವೇತಾ ಶೆಟ್ಟಿ, ನಿರ್ದೇಶಕ ನವಿಲುಗರಿ ನವೀನ್​ ಪಿ.ಬಿ., ಅನಿಲ್​, ಲಲಿತ್​ ಸೇರಿ ಕೆಲವು ಕಲಾವಿದರು ಭಾಗವಹಿಸಿ, ಗುರುರಾಯರ ಆಶೀರ್ವಾದ ಪಡೆದರು.

ಚಿತ್ರವನ್ನು ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಶೆಡ್ಯುಲ್​ ಪ್ಲ್ಯಾನ್​ ಮಾಡಿಕೊಂಡಿದೆ. ಚಿತ್ರಕ್ಕೆ ವಿ.ಆರ್​. ಚಂದ್ರು ಮತ್ತು ಪ್ರಮೋದ್​ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಪ್ರಣವ್​ ಸತೀಶ್​ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net