ಕುಂಭಮೇಳದಲ್ಲಿ ಪ್ರಕಾಶ್​​ ರಾಜ್​​ ಪುಣ್ಯಸ್ನಾನ; ನೆಟ್ಟಿಗರ ಟೀಕೆಗೆ ನಟ ಉತ್ತರಿಸಿದ್ದು ಹೀಗೆ..| Prakash Raj

Untitled design (60)
Published on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುಳ್ಳು ಸುದ್ದಿಗಳು ಮತ್ತು ನಕಲಿ ಫೋಟೋಗಳು ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿದೆ. ಯಾವುದು ನಿಜ, ಯಾವುದು ನಕಲಿ ಎಂದು ತಿಳಿಯುವುದು ಕಷ್ಟವಾಗುತ್ತಿದೆ. ಅವುಗಳನ್ನು ಸರಿಯಾಗಿ ಪರಿಶೀಲಿಸದಿದ್ದರೆ ನಕಲಿ ಫೋಟೋಗಳು ನಿಜವಾದವು ಎಂದು ತಪ್ಪಾಗಿ ಗ್ರಹಿಸುವ ಅಪಾಯವಿದೆ. ಅಂದ್ಹಾಗೆ ಇತ್ತೀಚೆಗೆ ನಟ ಪ್ರಕಾಶ್​​ ರಾಜ್(Prakash Raj)​ ಅವರ ಫೋಟೋವೊಂದು ಜಾಲತಾಣದಲ್ಲಿ ವೈರಲ್​ ಆಗಿತ್ತು.

ಫೋಟೋದಲ್ಲಿ ಹಿರಿಯ ನಟ ಪ್ರಕಾಶ್ ರಾಜ್ ಉತ್ತರ ಪ್ರದೇಶದ ಕುಂಭಮೇಳದಲ್ಲಿ ಅವರು ಪವಿತ್ರ ಸ್ನಾನ ಮಾಡುತ್ತಿರುವುದನ್ನು ನೋಡಬಹುದು. ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾದ ಪ್ರಯಾಗ್ ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ಪವಿತ್ರ ಕುಂಭಮೇಳ ನಡೆಯುತ್ತದೆ. ಈ ಸಮಾರಂಭದಲ್ಲಿ ಅತಿ ಹೆಚ್ಚು ಜನರು ಪಾಲ್ಗೊಂಡು ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ಪ್ರಕಾಶ್​ ರಾಜ್​ ಅವರು ಕೂಡು ತ್ರೀವೆಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂಬ ಫೋಟೋ ವೈರಲ್ ಆಗಿತ್ತು.

ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಇದು ನಿಜವಾದ ಫೋಟೋ ಎಂದು ಭಾವಿಸಿ ಟೀಕಿಸಿದರು. ನಾಸ್ತಿಕರು ಧಾರ್ಮಿಕ ಸಮಾರಂಭದಲ್ಲಿ ಹೇಗೆ ಭಾಗವಹಿಸುತ್ತಾರೆ ಎಂದು ಪ್ರಶ್ನಿಸಿದರು. ಸದ್ಯ ಈ ವಿವಾದದ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಟ ಪ್ರಕಾಶ್​ ರಾಜ್​​, ಇದನ್ನು ಸುಳ್ಳು ಸುದ್ದಿ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ರೀತಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದರು. ತಪ್ಪು ಮಾಹಿತಿಯ ಹರಡುವಿಕೆಯನ್ನು ಖಂಡಿಸಿದ ಅವರು, ಇದು ಅವಮಾನಕರ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಸೈಬರ್​ ಕ್ರೈಂನಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣರಾದವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದರು.

ಪ್ರಕಾಶ್​ ರಾಜ್​​ ಮುಂದೆ ರೆಟ್ರೋ, ಜನ ನಾಯಕನ್, ಫಾದರ್, ಬಿಗ್ ಪಿಕ್ಚರ್, ಮಿರಾಕಲ್, ಸತುರಂಗ ವೆಟ್ಟೈ 2, ಗೂಡಾಚಾರಿ 2, ಪೆನ್ ಆದಿಮೈ ಇಲ್ಲೈ, ಅಗ್ನಿ ಸಿರಗುಗಳು ಮತ್ತು ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ..(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net