ಯಾವಾಗ ರಾಜಕೀಯ ಪಿತೂರಿ ನಡೆಯಿತೋ, ಆಗ ನಾನು ಡಿಪ್ರೆಶನ್​ಗೆ ಹೋಗಿದ್ದೆ : ಪ್ರಜ್ವಲ್ ರೇವಣ್ಣ

WhatsApp Image 2024-05-27 at 4.25.27 PM
Published on

ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ವಿದೇಶಕ್ಕೆ ಹಾರಿದ್ದರು. ಅಂದು ರಾಜ್ಯ ಬಿಟ್ಟು ಹೋದ ಪ್ರಜ್ವಲ್​, ಇಷ್ಟು ದಿನಗಳು ಕಳೆದರೂ ಸಹ ಬೆಂಗಳೂರಿಗೆ ಮರಳಿ ಬಂದಿಲ್ಲ. ಸರಣಿ ಆರೋಪಗಳು ವ್ಯಕ್ತವಾದರು, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಮನವಿಗೂ ಸ್ಪಂದಿಸದ ಪ್ರಜ್ವಲ್, ರಾಜ್ಯಕ್ಕೆ ಹಿಂತಿರುಗಲೇ ಇಲ್ಲ. ಆದ್ರೆ, ಇಂದು ವಿದೇಶದಿಂದಲೇ ವಿಡಿಯೋ ಸಂದೇಶ ಕಳುಹಿಸಿರುವ ಸಂಸದ, ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ.

"ವಿದೇಶದಿಂದ ವಿಡಿಯೋ ರಿಲೀಸ್ ಮಾಡಿದ ಪ್ರಜ್ವಲ್​ ರೇವಣ್ಣ, ರಾಜ್ಯದ ಜನತೆ, ನನ್ನ ತಾತ ಎಚ್​.ಡಿ. ದೇವೇಗೌಡರು, ತಂದೆ ಮತ್ತು ತಾಯಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಇದೇ ಮೇ.31ರಂದು ರಾಜ್ಯಕ್ಕೆ ಬರುತ್ತೇನೆ, ಎಸ್​ಐಟಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗುತ್ತೇನೆ. ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಇದು ಪ್ರೀ-ಪ್ಲ್ಯಾನ್ ಆಗಿತ್ತು" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net