

ಚೆನ್ನೈ: ನಟ, ಡ್ಯಾನ್ಸ್ ಕೋರಿಯಾಗ್ರಫರ್ ಪ್ರಭುದೇವ್ ಗೌಪ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಪ್ರಭುದೇವ್ ಮದುವೆ ವಿಚಾರಕ್ಕೆ ಸ್ಪಷ್ಟೀಕರಣ ಸಿಕ್ಕಿದೆ. ಪ್ರಭುದೇವ್ ಮದುವೆಯಾಗಿದ್ದು ಯಾರನ್ನ? ಅವರ ಮಧ್ಯೆ ಪ್ರೀತಿ ಹುಟ್ಟಿದ್ದೇಗೆ ಎನ್ನುವುದನ್ನು ಅವರ ಸಹೋದರ ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಮೂಲಕ ಕ್ರಷರ್ ನಿರ್ಮಾಣ ಗುತ್ತಿಗೆ
ಈ ಹಿಂದೆ ಪ್ರಭುದೇವ್ ಅವರು ಬ್ಯಾಕ್ ಬೋನ್ ಮತ್ತು ಕಾಲುಗಳ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ಸಮಯದಲ್ಲಿ ಅಲ್ಲಿನ ವೈದ್ಯೆ ಹಿಮಾನಿಯೊಂದಿಗೆ ಸ್ನೇಹ ಬೆಳೆದಿದೆ. ಸ್ನೇಹ ಪ್ರೀತಿಗೆ ತಿರುಗಿದೆ. ಮೇ ತಿಂಗಳಲ್ಲಿ ಚೆನ್ನೈನಲ್ಲಿ ಇವರಿಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಲಾಕ್ಡೌನ್ ಇದ್ದ ಕಾರಣ ಯಾರಿಗೂ ತಿಳಿಸದೆ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿದೆ ಎಂದು ಅವರ ಸಹೋದರ ರಾಜು ಸುಂದರಮ್ ತಿಳಿಸಿದ್ದಾರೆ. ಮದುವೆಗೂ ಮೊದಲು ಎರಡು ತಿಂಗಳ ಕಾಲ ಅವರಿಬ್ಬರು ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನುವುದೂ ಬಹಿರಂಗವಾಗಿದೆ.
ಕೆಲ ಮೂಲಗಳ ಪ್ರಕಾರ ಹೇಮಾನಿ ಇದುವರೆಗೆ ಪ್ರಭುದೇವ್ ಅವರ ಕುಟುಂಬವನ್ನು ಕೇವಲ ಎರಡು ಬಾರಿ ಭೇಟಿ ಮಾಡಿದ್ದಾರಂತೆ. ಪ್ರಭುದೇವ್ಗೆ ರಾಮ್ಲತಾ ಅವರೊಂದಿಗೆ ಮೊದಲನೇ ಮದುವೆಯಾಗಿದೆ. ನಟಿ ನಯನತಾರಾ ಅವರೊಂದಿಗೆ ಸಂಬಂಧವಿದೆ ಎನ್ನುವ ವಿಚಾರಗಳೂ ಸಿನಿಮಾ ಕ್ಷೇತ್ರದಲ್ಲಿ ಕೇಳಿಬಂದಿತ್ತು. (ಏಜೆನ್ಸೀಸ್)