ಬೆದರಿಕೆ, ನಿಂದನೆ, ಅವಮಾನಕರ ಪೋಸ್ಟ್​ ಮಾಡಿದರೆ 5 ವರ್ಷ ಜೈಲು, 10 ಸಾವಿರ ರೂ ದಂಡ!

facebook
Published on

ತಿರುವನಂತಪುರಂ: ಫೇಸ್​ಬುಕ್​ನಲ್ಲಿ ಮನಸೋಇಚ್ಛೆ ಪೋಸ್ಟ್​ ಮಾಡುವ ಅಭ್ಯಾಸ ಇದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಬೇಕಾಬಿಟ್ಟಿ ಪೋಸ್ಟ್​ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ ಪೋಸ್ಟ್​ ಮಾಡಿ. ಏಕೆಂದರೆ ಈ ರೀತಿಯ ಪೋಸ್ಟ್​ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ, ನಿಂದನೆ, ಅವಮಾನಕರ ಮತ್ತು ಮಾನಹಾನಿಕರ ಪೋಸ್ಟ್​ಗಳನ್ನು ಹಾಕುವವರ ವಿರುದ್ಧ ಕೇರಳ ಸರ್ಕಾರ ಹೊಸ ಕಾನೂನೊಂದನ್ನು ಮಾಡಿದೆ. ಈ ಕಾನೂನಿನ ಪ್ರಕಾರ ಈ ರೀತಿಯ ಪೋಸ್ಟ್ ಮಾಡುವವರಿಗೆ ಐದು ವರ್ಷಗಳ ಜೈಲು ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಸರ್ಕಾರದ ಈ ಕಾನೂನಿಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಇದು ವಾಕ್​ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ರೀತಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್​ ದೂರಿವೆ. ಕಾಂಗ್ರೆಸ್​ ನಾಯಕ ಪಿ.ಚಿದಂಬರಂ ಅವರು ಸರ್ಕಾರದ ಈ ನಿರ್ಧಾರದಿಂದ ಆಘಾತಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net