More

    ನಗ್ರೋಟಾ ಎನ್​ಕೌಂಟರ್: ಉಗ್ರರ ಬಳಿ ಇತ್ತು ಪಾಕ್​ ಫೋನ್​, ಸಿಮ್​

    ನವದೆಹಲಿ: ನಗ್ರೋಟಾದಲ್ಲಿ ಎನ್​ಕೌಂಟರ್​ಗೆ ಬಲಿಯಾದ ಜೈಷ್ ಏ ಮೊಹಮ್ಮದ್ (ಜೆಇಎಂ) ಸಂಘಟನೆಯ ನಾಲ್ವರು ಉಗ್ರರ ಬಳಿ ಪಾಕಿಸ್ತಾನ ನಿರ್ಮಿತ ಫೋನ್ ಮತ್ತು ಸಿಮ್​ಗಳಿದ್ದವು. ಅವುಗಳ ಮೂಲ ಅವರು ಪಾಕಿಸ್ಥಾನದಲ್ಲಿರುವ ಉಗ್ರ ಸಂಘಟನೆಯ ನಾಯಕರು ಮತ್ತು ಸೇನೆಯ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.

    ಘಟನಾ ಸ್ಥಳದಿಂದ ಭದ್ರಾತಪಡೆ ವಶಪಡಿಸಿಕೊಂಡಿರುವ ವಸ್ತುಗಳಲ್ಲಿ ಮೊಬೈಲ್ ಹ್ಯಾಂಡ್​ಸೆಟ್​ (ಎಂಪಿಡಿ 2505 ಮಾದರಿ), ಡಿಜಿಟಲ್ ರೇಡಿಯೋ ಮತ್ತು ಪಾಕಿಸ್ತಾನಿ ಸಿಮ್​ ಕಾರ್ಡ್​ಗಳು, ವೈರ್​ಲೆಸ್ ಸೆಟ್​, ಜಿಪಿಎಸ್ ಡಿವೈಸ್, ಪಾಕ್ ನಿರ್ಮಿತ ಶೂಗಳು ಇವೆ. ಕರಾಚಿ ನಿರ್ಮಿತ ಔಷಧಗಳೂ ಸಿಕ್ಕಿವೆ. ಮೊಬೈಲ್​ ಫೋನ್​ಗೆ ಬಂದಿರುವ ಸಂದೇಶ ಇವುಗಳನ್ನೆಲ್ಲ ಗಮನಿಸಿದರೆ ಪಾಕ್ ಕೈವಾಡ ಕಂಡುಬಂದಿದೆ.

    ಇದನ್ನೂ ಓದಿ: ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಯೋಧರು- ಹೆದ್ದಾರಿ ಕ್ಲೋಸ್​

    ಫೋನ್​ನಲ್ಲಿದ್ದ ಕೆಲವು ಸಂದೇಶ ಹೀಗಿದೆ – “Kahan phnche, ya soorte haal hai. Koi mushkil toh nahi ” (ಎಲ್ಲಿಗೆ ತಲುಪಿದ್ರಿ, ಹೇಗಿದೆ ಪರಿಸ್ಥಿತಿ ಅಲ್ಲಿ. ಇದುವರೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಭಾವಿಸುತ್ತೇನೆ). ಇದಕ್ಕೆ ಉಗ್ರರು ಪ್ರತಿಕ್ರಿಯಿಸಿದ್ದು, ಇದುವರೆಗೆ ತೊಂದರೆ ಆಗಿಲ್ಲ. 2 ಗಂಟೆಗೆ ತಲುಪಿದ್ವಿ. ಆ ಮೇಲೆ ತಿಳಿಸುತ್ತೇವೆ ಎಲ್ಲ ವಿಚಾರ ಎಂಬ ಸಂದೇಶಗಳೂ ಕಾಣಿಸಿವೆ. (ಏಜೆನ್ಸೀಸ್)

    26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !

    ನಗ್ರೋಟಾ ಉಗ್ರರ ಉಸ್ತುವಾರಿ ನೋಡ್ಕೊಳ್ತಿದ್ದುದು ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ಸಹೋದರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts