More

    300 ಕೋಟಿ ರೂ.ಬಿಗ್​ಬಡ್ಜೆಟ್​ ಸಿನಿಮಾಗೆ ಪ್ರಭಾಸ್ ಗ್ರೀನ್ ಸಿಗ್ನಲ್…

    ಹೈದರಾಬಾದ್​​: ಪ್ರಭಾಸ್ ಸಲಾರ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದಲ್ಲದೇ ಪ್ರಭಾಸ್ ಇನ್ನೆರಡು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಜತೆಗೆ ಹಿಟ್ ಚಿತ್ರದ ನಿರ್ದೇಶಕರ ಜೊತೆ ಪ್ರಭಾಸ್ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬುದು ಲೇಟೆಸ್ಟ್ ಟಾಕ್ ಆಗಿದೆ.

    ಇದನ್ನೂ ಓದಿ: ಪ್ರಭಾಸ್ ಹೀರೋಯಿನ್ ಜತೆ ಕಟ್ಟಪ್ಪ ಪ್ರೇಮ… ಮತ್ತೊಬ್ಬ ನಾಯಕನ ಎಂಟ್ರಿಯೊಂದಿಗೆ ಸೀನ್ ರಿವರ್ಸ್!
    ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್, ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಸದ್ಯ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್​ನಲ್ಲಿ ಸಲಾರ್ ಬಿಡುಗಡೆಯಾಗಲಿದೆ. ಆ ನಂತರ ‘ಪ್ರಾಜೆಕ್ಟ್ ಕೆ’, ನಂತರ ಮಾರುತಿ ನಿರ್ದೇಶನದ ‘ರಾಜಾ ಡಿಲಕ್ಸ್’ ಜೊತೆಗೆ ಮತ್ತೊಂದು ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಡಿಸೆಂಬರ್ನಲ್ಲಿ ಸಲಾರ್ ಬಿಡುಗಡೆಯಾಗಲಿದೆ. ಆ ನಂತರ ‘ಪ್ರಾಜೆಕ್ಟ್ ಕೆ’, ನಂತರ ಮಾರುತಿ ನಿರ್ದೇಶನದ ‘ರಾಜಾ ಡಿಲಕ್ಸ್’ ಜೊತೆಗೆ ಮತ್ತೊಂದು ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಸೀತಾ ರಾಮಂ ನಿರ್ದೇಶಕ ನಿರ್ದೇಶನ: ಸೀತಾ ರಾಮಂ ಚಿತ್ರದ ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದ ನಿರ್ದೇಶಕ ಹನು ರಾಘವಪುಡಿ ಅವರ ನಿರ್ದೇಶನದಲ್ಲಿ ಪ್ರಭಾಸ್ ಸಿನಿಮಾ ಮಾಡಲಿದ್ದಾರೆ. 300 ಕೋಟಿಯ ಅದ್ಧೂರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಮೂಡಿ ಬರಲಿದೆ.

    ಪ್ರಭಾಸ್ ಈ ಪ್ಯಾನ್ ಇಂಡಿಯಾ ಚಿತ್ರವನ್ನು ವಿಶ್ವದಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಇದೆ. ಯುವಿ ಕ್ರಿಯೇಷನ್ಸ್ ಈ ಚಿತ್ರವನ್ನು ಬಾಲಿವುಡ್​ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಲಿದೆ ಎಂದು ವರದಿಯಾಗಿದೆ.

    ಇನ್ನು ಪ್ರಭಾಸ್ ವಿಚಾರಕ್ಕೆ ಬಂದರೆ.. ಪ್ರಭಾಸ್ ಈಶ್ವರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರಭಾಸ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

    ‘ಲಿಯೋದಲ್ಲಿ ರೇಪ್​ ಸೀನ್​ ಇರಬೇಕಿತ್ತು’ ಎಂದ ಮನ್ಸೂರ್ ಅಲಿ…’ಇಂತಹ ನೀಚನೊಂದಿಗೆ ಮತ್ತೆ ನಟಿಸಲ್ಲ’ ಎಂದ ತ್ರಿಷಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts