More

    ‘ಲಿಯೋದಲ್ಲಿ ರೇಪ್​ ಸೀನ್​ ಇರಬೇಕಿತ್ತು’ ಎಂದ ಮನ್ಸೂರ್ ಅಲಿ…’ಇಂತಹ ನೀಚನೊಂದಿಗೆ ಮತ್ತೆ ನಟಿಸಲ್ಲ’ ಎಂದ ತ್ರಿಷಾ…

    ಚೆನ್ನೈ: ಲಿಯೋ ಚಿತ್ರದಲ್ಲಿ ನಾಯಕಿ ತ್ರಿಷಾ ಮೇಲೆ ಅತ್ಯಾಚಾರದ ದೃಶ್ಯ ಇಲ್ಲದಿರುವುದು ಬೇಸರ ತಂದಿದೆ ಎಂದು ಹಿರಿಯ ನಟ ಮನ್ಸೂರ್ ಅಲಿಖಾನ್ ಹೇಳಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯ ಚಿತ್ರರಂಗದ ಬಹುತೇಕ ಮಂದಿ ಇದನ್ನು ಖಂಡಿಸುತ್ತಿದ್ದು, ತ್ರಿಷಾ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇಂತಹ ನೀಚ ವ್ಯಕ್ತಿಯೊಂದಿಗೆ ಮತ್ತೆ ನಟಿಸುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಬೃಂದಾವನ ಸೀರಿಯಲ್​ಗೆ ಟಿಕ್ ಟಾಕ್ ಸ್ಟಾರ್ ಎಂಟ್ರಿ; ಈ ಬದಲಾವಣೆ ಒಪ್ತಾರಾ ಪ್ರೇಕ್ಷಕರು….
    ಮನ್ಸೂರ್ ಅಲಿಖಾನ್ ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ನಾಯಕಿಯರಾದ ಖುಷ್ಬೂ, ರೋಜಾ ಸೇರಿದಂತೆ ಹಲವರೊಂದಿಗೆ ರೇಪ್ ಸೀಕ್ವೆನ್ಸ್ ಮಾಡಿದ್ದೇನೆ. ಆದರೆ ನನಗೆ ಲಿಯೋ ಪಾತ್ರದ ಆಫರ್ ಬಂದಾಗ, ನಾನು ತ್ರಿಷಾ ಜೊತೆ ರೇಪ್ ಸೀಕ್ವೆನ್ಸ್ ಮಾಡುತ್ತೇನೆ ಎಂದು ಭಾವಿಸಿದೆ. ದುರದೃಷ್ಟವಶಾತ್ ಸಿನಿಮಾದಲ್ಲಿ ಅಂತಹ ಸೀಕ್ವೆನ್ಸ್ ಇಲ್ಲ ಎಂದು ಲಿಯೋ ಚಿತ್ರದ ಕುರಿತು ಮಾತನಾಡುವಾಗ ಹೇಳಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ.

    ಲಿಯೋ ನಟ ಮನ್ಸೂರ್ ಅಲಿ ಖಾನ್ ಅವರ ಕಾಮೆಂಟ್​ಗಳು ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿವೆ. ಸ್ಟಾರ್ ಹೀರೋಯಿನ್ ತ್ರಿಷಾ ಬಗ್ಗೆ ಆ ರೀತಿ ಮಾತನಾಡಿದ್ದಕ್ಕೆ ಕಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ನಟ, ನಟಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತಹ ನೀಚ ಬುದ್ಧಿಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂಥವರಿಗೆ ಸಿನಿಮಾದಲ್ಲಿ ಅವಕಾಶ ಕೊಟ್ಟರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

    ನೀಚ ವ್ಯಕ್ತಿ ಜತೆ ನಟಿಸಲ್ಲ: ಇನ್ನು ತ್ರಿಶಾ ಟ್ವೀಟ್‌ನಲ್ಲಿ ‘ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಅಸಹ್ಯಕರವೆಂದು ತೋರುತ್ತದೆ. ಇನ್ನು ಮುಂದೆ ಇವನಂತಹ ಕ್ರೂರಿಯೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುವುದಿಲ್ಲ. ನನ್ನ ಉಳಿದ ಸಿನಿಮಾ ಜೀವನದಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಇಂತಹ ವ್ಯಕ್ತಿಗಳು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ಆಕೆಯ ಅಭಿಮಾನಿಗಳು ಕೂಡ ಮನ್ಸೂರ್​ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಕೂಡ ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ನಿರಾಕರಿಸಿದ್ದಾರೆ.

    ಲೋಕೇಶ್ ತಮ್ಮ ಟ್ವೀಟ್ ನಲ್ಲಿ “ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಮನ್ಸೂರ್ ಅಲಿ ಖಾನ್ ಅವರು ಮಹಿಳೆಯರ ಬಗ್ಗೆ ಮಾಡಿದ ದ್ವೇಷಪೂರಿತ ಕಾಮೆಂಟ್‌ಗಳನ್ನು ನೋಡಿ ನನಗೆ ತುಂಬಾ ಕೋಪವಾಗಿದೆ. ಇಂತಹ ವರ್ತನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಾವು ಮಹಿಳೆಯರು ಮತ್ತು ಸಹ ನಟರನ್ನು ಗೌರವಿಸಬೇಕು. ಯಾವುದೇ ಇಂಡಸ್ಟ್ರಿಯಲ್ಲಿ ಹೀಗೇ ಇರಬೇಕು” ಖಾನ್ ಲಿಯೋದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಈ ಹಿಂದೆಯೂ ಅನುಚಿತ ಕಾಮೆಂಟ್​: ಈ ಹಿಂದೆ ಲಿಯೋ ನಟ ಮನ್ಸೂರ್ ಅಲಿಖಾನ್ ಜೈಲರ್ ಚಿತ್ರದ ಕವಲಯ್ಯಾ.. ಹಾಡಿಗೆ ಅನುಚಿತ ಕಾಮೆಂಟ್ ಮಾಡಿದ್ದರು. ಹಾಡಿನ ಸಂಗೀತ ಮತ್ತು ಸ್ಟೆಪ್ಸ್ ಚೆನ್ನಾಗಿಲ್ಲ ಎಂದಿದ್ದು, ‘ಕಾವಲಯ್ಯ ಹಾಡಿನಲ್ಲಿ ತಮನ್ನಾ ಹೆಜ್ಜೆ ತುಂಬಾ ಕಳಪೆಯಾಗಿದೆ. ‘ಬೇಕು..’ ಎಂದು ತಾಳ್ಮೆಯಿಂದ ಕೈ ಬೀಸುವುದು ನೋಡಲು ತುಂಬಾ ಅಸಹ್ಯಕರ. ಇಂತಹ ಹಾಡುಗಳು ಮತ್ತು ಸ್ಟೆಪ್ ಗಳಿಗೆ ಸೆನ್ಸಾರ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಮನ್ಸೂರ್ ಅಲಿ ಖಾನ್ ಟೀಕಿಸಿದ್ದರು.

    2023ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts