More

    ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’

    ಹೈದರಾಬಾದ್​: ಪ್ರಭಾಸ್​ ಮದುವೆ ಮದುವೆಯಾಗುತ್ತಾರೆ? ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅದರಲ್ಲೂ ಪ್ರಭಾಸ್​ ಹಾಜರಿರುವ ಸಭೆ-ಸಮಾರಂಭಗಳಲ್ಲಿ ಈ ಪ್ರಶ್ನೆ ಮಿಸ್​ ಇಲ್ಲದೆ ಎದುರಾಗುತ್ತದೆ ಮತ್ತು ಈ ಪ್ರಶ್ನೆಗೆ ಪ್ರಭಾಸ್​ ನಕ್ಕು ಸುಮ್ಮನಾಗುತ್ತಾರೆ. ಈಗ ಪುನಃ ಇಂಥದ್ದೊಂದು ಪ್ರಶ್ನೆ ಎದುರಾಗಿದೆ ಮತ್ತು ಈ ಬಾರಿ ಪ್ರಭಾಸ್​ ಉತ್ತರ ಕೊಟ್ಟಿದ್ದಾರೆ.

    ಇದನ್ನೂ ಓದಿ: ಐವರು ಟಾಲಿವುಡ್​ ಸ್ಟಾರ್​ ನಟರು ರಿಜೆಕ್ಟ್​ ಮಾಡಿದ ಚಿತ್ರವನ್ನು ವಿಜಯ್​ ಒಪ್ಪಿದ್ದೇಕೆ?

    ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಆಹಾ ಓಟಿಟಿಯಲ್ಲಿ ಪ್ರಸಾರವಾಗುವ ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಆದ ‘ಅನ್​ಸ್ಟಾಪಬಲ್​ ವಿಥ್​ ಬಾಲಕೃಷ್ಣ’ದ ಎರಡನೇ ಸೀಸನ್​ ಶುರುವಾಗಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪ್ರಭಾಸ್​ ಮತ್ತು ಗೋಪಿಚಂದ್​ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ನಿರೂಪಕ ನಂದಮೂರಿ ಬಾಲಕೃಷ್ಣ ಇದೇ ಪ್ರಶ್ನೆಯನ್ನು ಕೇಳಿದ್ದಾರೆ.

    ‘ಇದಕ್ಕೂ ಮುನ್ನ ಈ ಕಾರ್ಯಕ್ರಮಕ್ಕೆ ಬಂದಿದ್ದ ಶರ್ವಾನಂದ್​ ಅವರಿಗೆ ನಿಮ್ಮ ಮದುವೆ ಯಾವಾಗ ಅಂತ ಕೇಳಿದಾಗ, ಮೊದಲು ಪ್ರಭಾಸ್​ ಅವರದ್ದಾಗಲಿ ಎಂದಿದ್ದರು. ಈಗ ಹೇಳಿ ನಿಮ್ಮ ಮದುವೆ ಯಾವಾಗ?’ ಎಂಬ ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಭಾಸ್​, ‘ಮೊದಲು ಸಲ್ಮಾನ್​ ಖಾನ್​ ಅವರ ಮದುವೆಯಾಗಲಿ. ಆ ನಂತರ ನೋಡೋಣ’ ಎಂದು ತಮಾಷೆ ಮಾಡಿದ್ದಾರೆ. ಅಲ್ಲಿಗೆ ಪ್ರಭಾಸ್​ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಪ್ರಶ್ನೆಯನ್ನಾಗಿಯೇ ಉಳಿಸಿದ್ದಾರೆ.

    ಇದನ್ನೂ ಓದಿ: ಹೊಸತನದ ಚಿತ್ರಗಳಿಗೆ ಮೊದಲ ಆದ್ಯತೆ … ‘ಗುಳ್ಟು’ ನವೀನ್ ಸ್ಪೀಕಿಂಗ್​

    ಈ ಕಾರ್ಯಕ್ರಮದಲ್ಲಿ ಪ್ರಭಾಸ್​ ತಮ್ಮ ವೃತ್ತಿಜೀವನ, ಮುಂದಬರುವ ಚಿತ್ರಗಳು ಸೇರಿದಂತೆ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ.

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts