More

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಅತಿರೇಕದಿಂದಾಗಿ ಫ್ಯಾನ್ಸ್​ವಾರ್​ ಉಂಟಾಗಿ, ಅಹಿತಕರ ಘಟನೆಗಳೂ ಸಂಭವಿಸಿರುವ ಹಿನ್ನೆಲೆಯಲ್ಲಿ ಹಲವಾರು ನಟ-ನಟಿಯರು ಅದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಎಲ್ಲರೂ ಒಂದಾಗಿ ಇರಬೇಕು, ನಾವೆಲ್ಲ ಒಂದೇ ಎಂಬ ಮಂತ್ರವನ್ನು ಜಪಿಸಲಾರಂಭಿಸಿದ್ದಾರೆ. ಈ ಮಧ್ಯೆ ನಟಿ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ಅವರು ಸ್ಟಾರ್​ ನಟರೆಲ್ಲರಿಗೂ ಒಂದು ಸಲಹೆ ಕೂಡ ನೀಡಿದ್ದಾರೆ.

    ಅಭಿಮಾನಿಗಳ ಅತಿರೇಕ ಸೋಷಿಯಲ್ ಮೀಡಿಯಾದಲ್ಲೂ ಢಾಳಾಗಿ ಕಾಣುತ್ತಿದ್ದು, ಅಂಥ ಕೆಲವು ಪೋಸ್ಟ್​ಗಳ ಸ್ಕ್ರೀನ್​ಶಾಟ್ ಹಂಚಿಕೊಂಡಿರುವ ರಮ್ಯಾ, ಆ ಕೆಲವು ಖಾತೆಗಳನ್ನು ಬ್ಲಾಕ್ ಮಾಡುವಂತೆ ಟ್ವಿಟರ್​​ನವರಿಗೆ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಎಲ್ಲ ಫ್ಯಾನ್ಸ್ ಕ್ಲಬ್​ಗಳಿಗೆ ಕಿವಿಮಾತು ಹೇಳಿರುವ ಅವರು, ಸ್ಟಾರ್​ನಟರೆಲ್ಲರಿಗೂ ಸಲಹೆಯೊಂದನ್ನು ನೀಡಿದ್ದಾರೆ.

    ಎಲ್ಲಾ ಅಭಿಮಾನಿ ಸಂಘಗಳು ಸಜ್ಜನಿಕೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲ ನಟರು ತಮ್ಮ ಅಭಿಮಾನಿ ಸಂಘಗಳಿಗೆ ಇತರ ನಟರನ್ನು ಅಥವಾ ಯಾರನ್ನಾದರೂ ಟ್ರೋಲ್ ಮಾಡದಂತೆ ಎಚ್ಚರಿಕೆ ನೀಡಬೇಕು ಎಂದು ರಮ್ಯಾ ಸಲಹೆ ನೀಡಿದ್ದಾರೆ.

    ಮಾತ್ರವಲ್ಲ ಅಭಿಮಾನಿಗಳು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬೇಡಿ. ಎಲ್ಲಾ ನಿಂದನೆಗಳು ಮತ್ತು ಬೈಗುಳಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಅಂಥ ಕೆಲವು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೋರಿಕೊಂಡಿದ್ದಾರೆ.

    ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

    ಯುವತಿಯ ಬ್ಯಾಕ್​ ಮೇಲೆ ಸ್ಕೇಲ್​ನಲ್ಲಿ ಹೊಡೆದಿದ್ದಕ್ಕೆ 90 ಲಕ್ಷ ರೂ. ಕಳೆದುಕೊಂಡ ಬಾಸ್!

    ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts