More

    ‘ಶಿವ@58’ ಬರ್ತ್​ಡೇ ಹಾಡು ಬಿಡುಗಡೆ ಮಾಡಲಿದ್ದಾರೆ ಪುನೀತ್​ ರಾಜ್​ಕುಮಾರ್​

    ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಬರ್ತ್​ಡೇ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಜನ್ಮದಿನಕ್ಕೆ ಬ್ರೇಕ್​ ಹಾಕಿರುವ ಶಿವಣ್ಣ, ಅಭಿಮಾನಿಗಳಿಗೂ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ. ಆವತ್ತು ನಾನು ಮನೆಯಲ್ಲಿ ಇರುವುದಿಲ್ಲ ಎಂದೂ ಹೇಳಿದ್ದಾರೆ. ಅದನ್ನು ಗಮನದಟ್ಟಿಕೊಂಡ ಅಭಿಮಾನಿಗಳು ಸೋಷಿಯಲ್​ ಮೀಡಿಯಾಗಳಲ್ಲಿಯೇ ನೆಚ್ಚಿನ ನಟನ ಜನ್ಮದಿನಕ್ಕೆ ವಿಶೇಷ ಉಡುಗೊರೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ರಾಧೆ ಶ್ಯಾಮ್​ಗೂ ಮಾಸ್ಕ್​: ಇದು ಯಾರು ಮಾಡಿದ ಕೆಲಸ ಗೊತ್ತೆ?

    ಅಂದಹಾಗೆ, ಈಗಾಗಲೇ ಅಭಿಮಾನಿ ಗ್ರೂಪ್​ಗಳು ಬಗೆಬಗೆ ಸಿಡಿಪಿ (ಕಾಮನ್​ ಡಿಸ್ಪ್ಲೇ ಪಿಕ್ಚರ್​) ಮಾಡಿ, ಎಲ್ಲೆಡೆ ಟ್ರೆಂಡ್ ಮಾಡುತ್ತಿದ್ದಾರೆ. ಸಿನಿಮಾತಂಡಗಳು ಟೀಸರ್​, ಫಸ್ಟ್​ಲುಕ್​ ಬಿಡುಗಡೆ ಮಾಡುವ ಮುನ್ಸೂಚನೆ ನೀಡಿವೆ. ಅದೇ ರೀತಿ ಇಲ್ಲೊಂದು ಶಿವಣ್ಣ ಅಭಿಮಾನಿ ಬಳಗ ವಿಶೇಷವಾದ ಹಾಡನ್ನು ಹೊರತರಲು ಸಿದ್ಧತೆ ಮಾಡಿಕೊಂಡಿದೆ.
    ವರುಣ್​ ಕುಮಾರ್ ಗೌಡ ಮತ್ತು ಕಿರಿಕ್ ಕೀರ್ತಿ ಶಿವ@58 ಹೆಸರಿನ ಹಾಡನ್ನು ಈಗಾಗಲೇ ಸಿದ್ಧಪಡಿಸಿದ್ದು, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಇಂದು ಸಂಜೆ 5.30ಕ್ಕೆ ಆ ಹಾಡನ್ನು ಅನಾವರಣ ಮಾಡಲಿದ್ದಾರೆ. ಈಗಾಗಲೇ ಹಾಡನ್ನು ನೋಡಿ ಮೆಚ್ಚಿಕೊಂಡಿರುವ ಅಪ್ಪು, ಅಭಿಮಾನಿಗಳ ಈ ಕಾರ್ಯಕ್ಕೆ ಜೈ ಎಂದಿದ್ದಾರೆ.

    ಇದನ್ನೂ ಓದಿ: ನೀ ಹಾಳಾಗಿ ಹೋಗ್ತೀಯ ಅಂತ ಅನುಪಮ್​ಗೆ ಹಲವರು ಹೇಳಿದ್ದರಂತೆ …

    ವರುಣ್​ ಸ್ಟುಡಿಯೋಸ್​ ಈ ಹಾಡನ್ನು ಸಿದ್ಧಪಡಿಸಿದ್ದು, ಗುಮಿನೆನೆ ವಿಜಯ್​ ಸಂಗೀತ ನೀಡಿದ್ದಾರೆ. ಅನಿರುದ್ಧ ಶಾಸ್ತ್ರಿ ಹಾಡಿಗೆ ಧ್ವನಿ ನೀಡಿದ್ದು, ಭಜರಂಗಿ ಮೋಹನ್​ ಸಾಹಿತ್ಯ ಒದಗಿಸಿದ್ದಾರೆ. ಫಿಲ್ಮೀ ಕಲ್ಟ್ ವಿನ್ಯಾಸದ ಕೆಲಸ ಮಾಡಿದೆ. ಕೀರ್ತಿ ಗೌಡ ಮತ್ತು ಪ್ರಜ್ವಲ್​ ಲಿರಿಕಲ್​ ವಿಡಿಯೋ ಡಿಸೈನ್ ಮಾಡಿದ್ದಾರೆ. ಕೃಷ್ಣ ಸಂಕಲನ ನಿಭಾಯಿಸಿದ್ದಾರೆ.

    ಚಿತ್ರೀಕರಣಕ್ಕೆ ಹೊರಟ ಬಾಲಿವುಡ್ ಸೆಲೆಬ್ರಿಟಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts