ಇದು ಹೇಗಿದೆ ಎಂದರೆ ಮಡಿಕೆಯೊಂದು...; ಸೂರ್ಯಕುಮಾರ್​ ಹಿಡಿದ ಕ್ಯಾಚ್ಅನ್ನು ಪ್ರಶ್ನಿಸಿದವರಿಗೆ ಖಡಕ್​ ಟಾಂಗ್​ ಕೊಟ್ಟ ಗಾವಸ್ಕರ್

Surya Sunil
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮ ನೇತೃತ್ವದ ಟೀಮ್​ ಇಂಡಿಯಾ ಜಯಿಸಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಟೀಮ್​ ಇಂಡಿಯಾ ಯಶಸ್ಸಿನಲ್ಲಿ ಬೌಲರ್​ಗಳೊಂದಿಗೆ ಸೂರ್ಯಕುಮಾರ್​ ಯಾದವ್​ ಬೌಂಡರಿ ಲೈನ್​ನಲ್ಲಿ ಹಿಡಿದ ಆ ಕ್ಯಾಚ್​ ಪ್ರಮುಖ ಪಾತ್ರ ವಹಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.

ಮೆಚ್ಚುಗೆಯ ನಡುವೆಯೇ ವಿವಾದಕ್ಕೆ ಕಾರಣವಾದ ಆ ಕ್ಯಾಚಿನ ಕುರಿತು ತನಿಖೆಯಾಗಬೇಕಿದೆ ಎಂದು ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾದ ಪತ್ರಿಕೆಗಳಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಷ್ಟನೆಯಾಗಿ ಐಸಿಸಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿತ್ತು. ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್​ ವಿರೋಧಿಗಳಿಗೆ ತಮ್ಮ ಮಾತಿನ ಮೂಲಕವೇ ಚಾಟಿ ಬೀಸಿದ್ದಾರೆ. ಈ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಸೂರ್ಯಕುಮಾರ್​ ಯಾದವ್​ ಡೇವಿಡ್​ ಮಿಲ್ಲರ್​ ಹೊಡೆದ ಚೆಂಡನ್ನು ಬೌಂಡರಿ ಲಯನ್​ ಬಳಿ ಹಿಡಿದರು. ಈ ಕ್ಯಾಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಸ್ಟ್ರೇಲಿಯಾದ ಪ್ರತಿಷ್ಠಿತ ದಿನಪತ್ರಿಕೆ ಒಂದರಲ್ಲಿ ವರದಿಯನ್ನು ಪ್ರಕಟಿಸಲಾಗಿದೆ. . ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್​ ಯಾವುದೇ ತಪ್ಪು ಮಾಡದೆ ಹಿಡಿದಿದ್ದಾರೆ.

ಸೂರ್ಯಕುಮಾರ್​ ಕರೆಕ್ಟಾಗಿ ಕ್ಯಾಚ್​ ಹಿಡಿದಿದ್ದು, ನನ್ನ ಪ್ರಕಾರ ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸುತ್ತೇನೆ. ಆದರೆ, ಆಸ್ಟ್ರೇಲಿಯಾ ಮೂಲದ ಪತ್ರಿಕೆ ಇದನ್ನು ಪ್ರಶ್ನಿಸಿದ್ದುಮ ನನಗೆ ಯಾಕೋ ಸರಿ ಅನ್ನಿಸುತ್ತಿಲ್ಲಾ. ಏಕೆಂದರೆ ಮೊದಲು ನಮ್ಮನ್ನು ಪ್ರಶ್ನಿಸುವ ಮೊದಲು ಅವರು ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಮಾಡಿರುವ ಘೋರ ಅಪರಾಧಗಳ ವಿಡಿಯೋಗಳನ್ನು ಒಮ್ಮೆ ನೋಡಿ ಆ ನಂತರ ಮಾತನಾಡುವುಸು ಸೂಕ್ತ ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾದವರು ಮಾಡುತ್ತಿರುವ ಆರೋಪ ಹೇಗಿದೆ ಎಂದರೆ ಮಡಿಕೆಯೊಂದು ಕೆಟಲ್ ಅನ್ನು ಕಪ್ಪು ಎಂದು ಕರೆದಂಗಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್​ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net