More

    ಭಾರತ ಟೆಸ್ಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ, ಕೊಹ್ಲಿ ಪಡೆಗೆ ಪೂನಂ ಪಾಂಡೆ ಆಫರ್​!

    ನವದೆಹಲಿ: ಭಾರತ ತಂಡ ಪ್ರಶಸ್ತಿ ಗೆದ್ದರೆ ಬೆತ್ತಲಾಗುವುದಾಗಿ 2011ರಲ್ಲಿ ಏಕದಿನ ವಿಶ್ವಕಪ್ ವೇಳೆ ಎಂಎಸ್ ಧೋನಿ ಬಳಗಕ್ಕೆ ಆಫರ್ ನೀಡಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ, ಇದೀಗ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವಿಶ್ವಕಪ್ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆಡುತ್ತಿರುವ ವೇಳೆ ವಿರಾಟ್ ಕೊಹ್ಲಿ ಬಳಗಕ್ಕೂ ಅಂಥದ್ದೇ ಆಫರ್ ಪ್ರಕಟಿಸಿದ್ದಾರೆ!

    ಇತ್ತೀಚೆಗೆ ವೈಯಕ್ತಿಕ ವಿಚಾರಗಳಿಂದಾಗಿ ಸಾಕಷ್ಟು ವಿವಾದಗಳಿಗೆ ಗ್ರಾಸವಾಗಿದ್ದ ಪೂನಂ ಪಾಂಡೆ ಕ್ರಿಕೆಟ್ ಸಮಯದಲ್ಲಿ ಮತ್ತೊಮ್ಮೆ ವಿವಾದ ಎದುರಿಸಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಭಾರತ ಗೆದ್ದರೆ ಬೆತ್ತಲಾಗುವುದಾಗಿ ಪೂನಂ ಪಾಂಡೆ ಘೋಷಿಸಿದ್ದಾರೆ.

    ಇದನ್ನೂ ಓದಿ: ಫ್ಲೈಯಿಂಗ್​ ಸಿಖ್​ ಮಿಲ್ಖಾ ಸಿಂಗ್ ನಿಧನಕ್ಕೆ ಪಾಕಿಸ್ತಾನದಲ್ಲೂ ಕಂಬನಿ

    ‘ಕ್ರಿಕೆಟ್ ಚಾಲು ಹೈ? ಲೋಗ್ ಕ್ರಿಕೆಟ್ ಖೇಲ್ ರಹೇ ಹೈ? ಹಾಗಾದರೆ ನಾನು ಈ ಸಲವೂ ಭಾರತ ತಂಡ ಗೆದ್ದರೆ ಬೆತ್ತಲಾಗುತ್ತೇನೆ. ಈ ರೀತಿಯ ವಿವಾದವನ್ನು ನಾನು ಮತ್ತೊಮ್ಮೆ ಎದುರಿಸಲು ಸಿದ್ಧ’ ಎಂದು ಪೂನಂ ಪಾಂಡೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 2011ರ ಏಕದಿನ ವಿಶ್ವಕಪ್ ಸಮಯದಲ್ಲೂ ಪೂನಂ ಪಾಂಡೆ ಇದೇ ರೀತಿಯ ಘೋಷಣೆಯ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ತಮ್ಮ ಕೆಲ ನಗ್ನ ಪೋಸುಗಳ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts