More

    ಫ್ಲೈಯಿಂಗ್​ ಸಿಖ್​ ಮಿಲ್ಖಾ ಸಿಂಗ್ ನಿಧನಕ್ಕೆ ಪಾಕಿಸ್ತಾನದಲ್ಲೂ ಕಂಬನಿ

    ನವದೆಹಲಿ: ಕರೊನಾ ಸೋಂಕಿನಿಂದಾಗಿ ಶುಕ್ರವಾರ ರಾತ್ರಿ ನಿಧನ ಹೊಂದಿದ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ನಿಧನಕ್ಕೆ ಭಾರತದ ಗಣ್ಯರು ಕಂಬನಿ ಮಿಡಿದಿರುವ ನಡುವೆ ನೆರೆಯ ದೇಶ ಪಾಕಿಸ್ತಾನದಲ್ಲೂ ಸಂತಾಪ ವ್ಯಕ್ತವಾಗಿದೆ. ಮಿಲ್ಖಾ ಸಿಂಗ್ ವೃತ್ತಿಜೀವನದಲ್ಲಿ ಪ್ರಬಲ ಪ್ರತಿಸ್ಪರ್ಧಿ ಎನಿಸಿದ್ದ ಪಾಕಿಸ್ತಾನದ ಅಥ್ಲೀಟ್ ಅಬ್ದುಲ್ ಖಾಲಿಕ್ ಅವರ ಪುತ್ರ ಮೊಹಮದ್ ಇಜಾಜ್ ಕಂಬನಿ ಮಿಡಿದಿದ್ದಾರೆ. 1960ರಲ್ಲಿ ಖಾಲಿಕ್ ವಿರುದ್ಧ ಲಾಹೋರ್‌ನಲ್ಲಿ ನಡೆದ ರೇಸ್‌ನಲ್ಲಿ ಗೆದ್ದ ಬಳಿಕವೇ ಮಿಲ್ಖಾ ಸಿಂಗ್‌ಗೆ ‘ಫ್ಲೈಯಿಂಗ್ ಸಿಖ್’ ಎಂಬ ಹೆಸರು ಬಂದಿತ್ತು.

    ತಮ್ಮ ಬಯೋಪಿಕ್ ‘ಭಾಗ್ ಮಿಲ್ಖಾ ಭಾಗ್’ ಸಿನಿಮಾದಲ್ಲಿನ ಖಾಲಿಕ್ ಪಾತ್ರದ ಹಕ್ಕಿಗೆ ಸಂಬಂಧಿಸಿದಂತೆ 2009ರಲ್ಲಿ ಮಿಲ್ಖಾ ಸಿಂಗ್ ಕರೆ ಮಾಡಿ ತಮ್ಮೊಂದಿಗೆ ಮಾತನಾಡಿದ್ದನ್ನೂ ಇಜಾಜ್ ಮೆಲುಕು ಹಾಕಿದ್ದಾರೆ. ‘ನಿನ್ನ ತಂದೆಯನ್ನು ಸೋಲಿಸಿದ ಬಳಿಕವೇ ನಾನು ಫ್ಲೈಯಿಂಗ್ ಸಿಖ್ ಆಗಿದ್ದು, ನನ್ನ ಜನಪ್ರಿಯತೆಗೆ ನಿನ್ನ ತಂದೆಯೂ ಕಾರಣ. ಅವರೊಬ್ಬ ಶ್ರೇಷ್ಠ ಅಥ್ಲೀಟ್’ ಎಂದು ಮಿಲ್ಖಾ ಆಗ ಹೇಳಿದ್ದರು ಎಂದಿದ್ದಾರೆ.

    ಇದನ್ನೂ ಓದಿ: ಬಿಸಿಸಿಐ ಶಕ್ತಿಗೆ ಮಣಿದ ವಿಂಡೀಸ್, ಐಪಿಎಲ್‌ಗೆ ದಾರಿ ಬಿಟ್ಟುಕೊಟ್ಟ ಸಿಪಿಎಲ್!

    ಏಷ್ಯನ್ ಗೇಮ್ಸ್‌ನಲ್ಲಿ 2 ಬಾರಿ 100 ಮೀಟರ್ ಓಟದಲ್ಲಿ ಚಿನ್ನ ಜಯಿಸಿದ್ದ ಅಬ್ದುಲ್ ಖಾಲಿಕ್ 1988ರಲ್ಲಿ 55ನೇ ವಯಸ್ಸಿನಲ್ಲೇ ಮೃತಪಟ್ಟಿದ್ದರು. 1956-60ರಲ್ಲಿ ಏಷ್ಯಾದ ವೇಗದ ಓಟಗಾರ ಎನಿಸಿದ್ದ ಖಾಲಿಕ್‌ಗೆ ‘ಫ್ಲೈಯಿಂಗ್ ಬರ್ಡ್ ಆಫ್​ ಏಷ್ಯಾ’ ಎಂಬ ಹೆಸರನ್ನು ಭಾರತದ ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರು ನೀಡಿದ್ದರು ಎಂದೂ ಇಜಾಜ್ ನೆನಪಿಸಿಕೊಂಡಿದ್ದಾರೆ.

    ಪಾಕಿಸ್ತಾನದಲ್ಲಿ ನನ್ನ ತಂದೆಗೆ ಸರ್ಕಾರದಿಂದ ಎಲ್ಲ ಗೌರವಗಳು ದೊರೆತಿದ್ದರೂ, ಈಗಿನ ಯುವ ಜನಾಂಗಕ್ಕೆ ಅವರ ಸಾಧನೆಗಳು ಗೊತ್ತಿರಲಿಲ್ಲ. ಭಾಗ್ ಮಿಲ್ಖಾ ಭಾಗ್ ಸಿನಿಮಾದಿಂದ ನನ್ನ ತಂದೆಯ ಸಾಧನೆಗಳನ್ನು ಎಲ್ಲರಿಗೂ ತಿಳಿಸಲು ನೆರವಾಯಿತು ಎಂದು ಇಜಾಜ್ ವಿವರಿಸಿದ್ದಾರೆ. ಬಾಂಗ್ಲಾದೇಶ ಯುದ್ಧದ ಬಳಿಕ ಅಬ್ದುಲ್ ಖಾಲಿಕ್ ಯುದ್ಧಕೈದಿಯಾಗಿದ್ದಾಗ ಮೀರಠ್ ಜೈಲಿಗೆ ಹೋಗಿ ಮಿಲ್ಖಾ ಮಾತನಾಡಿದ್ದರು ಮತ್ತು ಖಾಲಿಕ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದೂ ಹೇಳಿದ್ದಾರೆ.

    VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts