VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

ಮ್ಯೂನಿಚ್: ಪೋರ್ಚುಗಲ್ ಸೂಪರ್‌ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಅವರು ಗೋಲುಗಳ ಸರದಾರ. ಅಂತಾರಾಷ್ಟ್ರೀಯ ಫುಟ್‌ಬಾಲ್ ಮತ್ತು ಕ್ಲಬ್ ಫುಟ್‌ಬಾಲ್‌ಗಳಲ್ಲಿ ಕಳೆದ 20 ವರ್ಷಗಳಲ್ಲಿ 700ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಅವರ ಈ ಒಂದೊಂದು ಗೋಲು ಕೂಡ ಆಕರ್ಷಕವಾದುದು. ಇದೀಗ ಯುರೋ ಕಪ್‌ನಲ್ಲಿ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಸಿರುವ ಗೋಲೊಂದು ಎಲ್ಲರ ಗಮನಸೆಳೆದಿದೆ. 36ನೇ ವಯಸ್ಸಿನಲ್ಲೂ ಚಿರತೆಯಂತೆ ಎದುರಾಳಿ ಕೋಟೆಗೆ ನುಗ್ಗಿ ಗೋಲು ಬಾರಿಸುವ ಅವರ ಚಕಚಕ್ಯತೆ ಮಾಸಿಲ್ಲ ಎಂಬುದಕ್ಕೆ ಈ ಗೋಲು ಸಾಕ್ಷಿಯಾಗಿ ನಿಂತಿದೆ. ಶನಿವಾರ ನಡೆದ … Continue reading VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!