ಚಂದ್ರಯಾನ-3 ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷರಿಂದ ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥನೆ, ಪೂಜೆ

Chandrayaan3 a
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3ರ ಆರಂಭದಲ್ಲೇ ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿತ್ತು.

ತಿರುಪತಿಯಲ್ಲಿ ನಡೆದ ಪೂಜೆಯಲ್ಲಿ ಇಸ್ರೋದ ಇಂಜಿನಿಯರ್​ಗಳು ಪಾಲ್ಗೊಂಡಿದ್ದರು. ಆ ಬಳಿಕ ನಾಗರಪಂಚಮಿಯಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ದೇವಸ್ಥಾನದವರೇ ಪೂಜೆ ಮಾಡಿ ಇಸ್ರೋಗೆ ಶುಭ ಹಾರೈಸಿದ್ದರು.

ನಿನ್ನೆ ಹಾಗೂ ಇಂದು ಬೆಳಗಿನಿಂದ ಹಲವು ದೇವಸ್ಥಾನಗಳಲ್ಲಿ ಹಾಗೂ ಜನರು ಕೂಡ ತಮ್ಮ ಮನೆಗಳಲ್ಲಿ ಪೂಜೆ ಮಾಡಿ ಶುಭ ಹಾರೈಸುತ್ತಿದ್ದಾರೆ. ಈ ಮಧ್ಯೆ ನಿನ್ನೆ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತಿತರರು ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.

ತಮ್ಮ ಸಹೋದ್ಯೋಗಿಗಳ ಜತೆ ನಿನ್ನೆ ಸಂಜೆ ಅಲ್ಲಿಗೆ ತೆರಳಿದ್ದ ಸೋಮನಾಥ್, ಚಂದ್ರಯಾನ-3ರ ಸಾಫ್ಟ್​ ಲ್ಯಾಂಡಿಂಗ್​ ಸುಗಮವಾಗಿ ಆಗಲಿ ಎಂದು ಶ್ರೀಅಯ್ಯಪ್ಪ ಸ್ವಾಮಿಯಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net