

ಕೋಟ: ಕೊಕ್ಕರ್ಣೆ ಕಾಡೂರು ನಿವಾಸಿ ಬೇಬಿ ಹಾಗೂ ಲಕ್ಷ್ಮೀ ಎಂಬುವರ ಕಳೆದುಹೋಗಿದ್ದ 16 ಗ್ರಾಂ ಚಿನ್ನದ ಕರಿಮಣಿ ಮರಳಿ ದೊರೆತ ಹಿನ್ನೆಲೆಯಲ್ಲಿ ಅವರು ಪಾಂಡೇಶ್ವರ ಗ್ರಾಪಂ ವ್ಯಾಪ್ತಿಯ ಮೂಡಹಡು ಕಳಿಬೈಲು ಕೊರಗಜ್ಜನ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿದರು.
ಎಲ್ಲೆಡೆ ಹುಡುಕಾಡಿದರೂ ಕರಿಮಣಿ ಸರ ಸಿಗದ ಹಿನ್ನೆಲೆಯಲ್ಲಿ ಕೊರಗಜ್ಜನ ಮೊರೆ ಹೋಗಿದ್ದರು. ಕರಿಮಣಿ ಮನೆಯಲ್ಲೇ ಬಿದ್ದಿರುವ ಬಗ್ಗೆ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ನುಡಿದಿದ್ದು, ಅದರಂತೆ ಸರ ಪತ್ತೆಯಾಗಿತ್ತು. ಇದೇ ಕುಟುಂಬಕ್ಕೆ ಸೇರಿದ ಚಿನ್ನದ ಬಳೆಯೊಂದು ಬೆಂಗಳೂರಿನ ಪರಿಸರದಲ್ಲಿ ಕಳೆದುಹೋಗಿತ್ತು. ಆ ಸಂದರ್ಭ ಕೊರಗಜ್ಜನಿಗೆ ಅಗೇಲು ಸೇವೆ ನೀಡುವ ಹರಕೆ ಹೊತ್ತ ಮರುಗಳಿಗೆಯಲ್ಲೇ ಬಳೆ ಪತ್ತೆಯಾಗಿತ್ತು.