More

  ಖ್ಯಾತ ನಟನ ಕಾರಿಗೆ ಕೇರಳ ಸಿಎಂ ಬೆಂಗಾವಲು ವಾಹನ ಡಿಕ್ಕಿ; ಪೊಲೀಸರಿಗೆ ದೂರು

  ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಯೊಂದಿಗೆ ಬಂದಿದ್ದ ಪೊಲೀಸ್ ವಾಹನವು ನಟ ಕೃಷ್ಣಕುಮಾರ್ ಕಾರಿಗೆ ಡಿಕ್ಕಿಯಾಗಿದೆ. ಈ ಕುರಿತಂತೆ ನಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಶುಕ್ರವಾರ ಬೆಳಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಂಸಿ ರಸ್ತೆಯ ಪಂದಳಂ ಮೂಲಕ ಪುತ್ತುಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

  ಇದನ್ನೂ ಓದಿ: ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…

  ನಂತರ ಕೃಷ್ಣಕುಮಾರ್ ಡಿಕ್ಕಿ ಹೊಡೆದ ಅದೇ ಕಾರಿನಲ್ಲಿ ಪಂದಳಂ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಪಾಯಕಾರಿಯಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಸಿಲುಕಿಸಲು ಯತ್ನಿಸಿದ್ದು, ಇದೇನು ಎಂದು ಪ್ರಶ್ನಿಸಿದ್ದಕ್ಕೆ ನಿಂದಿಸಿದ್ದಾರೆ ಎಂದು ಕೃಷ್ಣಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….

  ಉಪಚುನಾವಣೆ ಹಿನ್ನೆಲೆಯಲ್ಲಿ ಪುದುಪಲ್ಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿಯವರಿಗೆ ಬೆಂಗಾವಲಾಗಿ ಹೋಗುತ್ತಿದ್ದ ಪೊಲೀಸ್ ವಾಹನವೊಂದು ತಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಪ್ರಶ್ನಿಸಿದಾಗ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂದು ನಟ ಕೃಷ್ಣಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಕೃಷ್ಣಕುಮಾರ್ ಪಂದಳಂ ಪೊಲೀಸರಿಗೆ ದೂರು ನೀಡಿದ್ದಾರೆ.

  ಈ ಟಿಪ್ಸ್ ಪಾಲಿಸಿದರೆ…ರೇಷ್ಮೆ ಸೀರೆಯನ್ನು ಡ್ರೈ ಕ್ಲೀನಿಂಗ್ ಕೊಡುವ ಅಗತ್ಯವಿಲ್ಲ!

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts