ಸುಟ್ಟು ಕರಕಲಾದ ಮಹಿಳೆಯ ಶವ ಪತ್ತೆ ಪ್ರಕರಣ; ಪತಿಯೇ ಕೊಲೆಗಾರ, ಸಿಕ್ಕಿಬಿದ್ದ ಆರೋಪಿ..

arrest
Published on

ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಸುಟ್ಟು ಕರಕಲಾದ ಮಹಿಳೆಯ ಶವ ಪತ್ತೆಯಾಗಿದ್ದು, ಈ ಪ್ರಕರಣ ನಗರದ ಪೊಲೀಸರ ತಲೆ ಕೆಡಿಸಿತ್ತು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ, ಬಂಧಿಸಿದ್ದಾರೆ. ಅದರಲ್ಲೂ ಇಲ್ಲಿ ಪತಿಯೇ ಕೊಲೆಗಾರ ಎಂಬುದು ಗೊತ್ತಾಗಿದೆ.

ಜುಲೈ 3ರಂದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಮಸಂದ್ರ ಎಂಬಲ್ಲಿ ಮಹಿಳೆಯೊಬ್ಬರ ಸುಟ್ಟು ಕರಕಲಾದ ಶವ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚಲಾಗದಷ್ಟು ದೇಹ ಸುಟ್ಟು ಹೋಗಿದ್ದರಿಂದ ಪೊಲೀಸರಿಗೆ ಈ ಪ್ರಕರಣವನ್ನು ಭೇದಿಸುವುದು ಸವಾಲಾಗಿ ಪರಿಣಮಿಸಿತ್ತು.

ಅದಾಗ್ಯೂ ತನಿಖೆ ಮುಂದುವರಿಸಿದ ಕೆಂಗೇರಿ ಪೊಲೀಸರು ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಮಹಮ್ಮದ್ ರಫೀಕ್ ಬಂಧಿತ ಆರೋಪಿ. ಈತನ ಪತ್ನಿ ನಗೀನಾ ಕೊಲೆಯಾದಾಕೆ. ಈತ ಪತ್ನಿಯನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ. ಆರೋಪಿಯನ್ನು ಬಂಧಿಸಿಕೊಂಡು ಪೊಲೀಸರು ಬೆಂಗಳೂರಿಗೆ ಬರುತ್ತಿದ್ದಾರೆ. ಆ ಬಳಿಕದ ವಿಚಾರಣೆಯ ನಂತರ ಇನ್ನಷ್ಟು ಸಂಗತಿ ಹೊರಬೀಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net