ಹಾಡಹಗಲೇ ನಗರಸಭೆ ಮಾಜಿ ಅಧ್ಯಕ್ಷನ ಬರ್ಬರ ಕೊಲೆ; ಹೊಟ್ಟೆಗೆ ತಲವಾರ್ ಚುಚ್ಚಿಟ್ಟು ಹಾಗೇ ಹೋದ ಹಂತಕರು!

Murder
ದುಃಖತಪ್ತ ಸಂಬಂಧಿಕರು
Published on

ಕಲಬುರಗಿ: ನಗರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಹೊಟ್ಟೆಗೆ ತಲವಾರ್ ಚುಚ್ಚಿದ ಹಂತಕರು ಅದನ್ನು ಹಾಗೇ ಬಿಟ್ಟು ಹೋಗಿರುವಂಥ ಭೀಕರ ಪ್ರಕರಣ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ಅದೂ ಶಹಬಾದ್ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಕೊಲೆಗೀಡಾದ ವ್ಯಕ್ತಿ.

ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿ, 15 ರಿಂದ 20 ಬಾರಿ ಇರಿದಿದ್ದಾರೆ. ಬಳಿಕ ತಲವಾರ್​ನಿಂದ ಎದೆಗೆ ಚುಚ್ಚಿ ಅದನ್ನು ಹಾಗೇ ಇಟ್ಟು ಹೋಗಿದ್ದಾರೆ. ಗಂಭೀರ ಗಾಯಗೊಂಡ ಗಿರೀಶ್​ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ.

2020ರ ಫೆಬ್ರವರಿಯಲ್ಲಿ ಗಿರೀಶ್ ಕಂಬಾನೂರ್ ಸಹೋದರ ಸತೀಶ್ ಕಂಬಾನೂರ್ ಕೊಲೆಯಾಗಿತ್ತು. ಇದೀಗ ಗಿರೀಶ್​ ಕೂಡ ಕೊಲೆಯಾಗಿ ಹೋಗಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net