ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

1298447
Published on

ಮಂಡ್ಯ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಗಳೆಲ್ಲ ಉಕ್ಕಿ ಹರಿಯುತ್ತಿರುವುದರಿಂದ ಜಲಾಯಶಗಳು ಬಹುತೇಕ ಭರ್ತಿಯಾಗಿವೆ. ಅದರಲ್ಲೂ ಕೆಆರ್​ಎಸ್​ ಜಲಾಶಯದಲ್ಲಿ ನೀರು ವರ್ಣರಂಜಿತವಾಗಿ ಭೋರ್ಗರೆದು ಹರಿಯುತ್ತಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಯಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಹೆಚ್ಚುವರಿ ನೀರನ್ನು ಗೇಟ್​ಗಳನ್ನು ತೆರೆದು ಹೊರಬಿಡಲಾಗುತ್ತಿದೆ. ಪರಿಣಾಮವಾಗಿ ನೀರು ಕಲರ್​ಫುಲ್ ಆಗಿ ಕಾಣಿಸುತ್ತಿದ್ದು, ನೋಡುಗರಿಗೆ ರಂಜನೆಯನ್ನು ನೀಡುತ್ತಿದೆ.

ಕೆಆರ್​ಎಸ್ ಸದ್ಯ ಭರ್ತಿ ಹಂತಕ್ಕೆ ತಲುಪಿದ್ದು, ಡ್ಯಾಮ್​ 42,633 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 124.80 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 123.10 ಅಡಿ ಭರ್ತಿಯಾಗಿರುವುದರಿಂದ 41000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net