More

    ಮಾಸ್ಕ್​ ಹಾಕದೆ ರಸ್ತೆಗಿಳಿದ ಮಹಿಳೆಯ ಕಪಾಳಕ್ಕೆ ಹೊಡೆದ ಪೊಲೀಸ್! ಸಿಟ್ಟಿನಲ್ಲಿ ಪೆಟ್ಟನ್ನು ವಾಪಸು ಕೊಟ್ಟ ಮಹಿಳೆ!

    ಭೋಪಾಲ್: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಅನೇಕ ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಆದರೆ ಕರೊನಾ ನಿಯಮಗಳನ್ನೆಲ್ಲವನ್ನು ಗಾಳಿಗೆ ತೂರಿ, ಮಾಸ್ಕ್​ ಹಾಕದೆಯೇ ರಸ್ತೆಗಿಳಿದಿದ್ದ ಮಹಿಳೆಗೆ ಪೊಲೀಸ್​ ಪೇದೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಿಟ್ಟಿಗೆದ್ದ ಮಹಿಳೆ ವಾಪಾಸು ಪೊಲೀಸರಿಗೆ ಹೊಡೆದಿದ್ದಾಗಿ ಹೇಳಲಾಗಿದೆ.

    ಈ ರೀತಿಯ ಘಟನೆಯೊಂದು ಸಾಗರ ಜಿಲ್ಲೆಯ ರಾಹ್ಲಿ ಪೊಲೀಸ್​ ಠಾಣಾ ಪ್ರದೇಶದಲ್ಲಿ ನಡೆದಿದೆ. ನಗರದಲ್ಲಿ ಸೆಕ್ಷನ್​ 144 ಜಾರಿಯಿದ್ದು, ಯಾರೊಬ್ಬರೂ ಅನಗತ್ಯವಾಗಿ ಮನೆಯಿಂದ ಹೊರ ಬಾರದಿರುವಂತೆ ಎಚ್ಚರಿಸಲಾಗಿತ್ತು. ಆದರೆ ಅಮ್ಮ ಮಗಳು ಮನೆಯಿಂದ ಹೊರಬಂದು ಮಾಸ್ಕ್​ ಇಲ್ಲದೆಯೇ ಅಡ್ಡಾಡುತ್ತಿದ್ದರು. ಅವರನ್ನು ತಡೆದ ಪೊಲೀಸರು ಸುತ್ತಾಡುತ್ತಿರುವುದಕ್ಕೆ ಕಾರಣ ಕೇಳಿದ್ದಾರೆ. ದಂಡ ವಿಧಿಸಲು ಮುಂದಾಗಿದ್ದಾರೆ. ಆಗ ಅಮ್ಮ ಮಗಳ ಜೋಡಿ ಪೊಲಿಸರೊಂದಿಗೆ ಜಗಳಕ್ಕೆ ಮುಂದಾಗಿದೆ. ಜಗಳ ತಾರಕಕ್ಕೇರಿದ್ದು, ಮಹಿಳಾ ಪೊಲೀಸ್​ ಪೇದೆ, ಆ ಮಹಿಳೆಯ ಕೆನ್ನೆಗೆ ಒಂದೇಟು ಬಾರಿಸಿದ್ದಾರೆ.

    ಪೇದೆಯಿಂದ ಪೆಟ್ಟು ತಿಂದ ಸಿಟ್ಟಿನಲ್ಲಿ ಮಹಿಳೆ ವಾಪಸು ಮಹಿಳಾ ಪೇದೆಯ ಕೆನ್ನೆಗೆ ಬಾರಿಸಿದ್ದಾಳೆ. ಈ ರೀತಿ ಆಗುವಾಗ ಮಧ್ಯ ಪ್ರವೇಶಿಸಿದ ಇತರ ಪೊಲೀಸರು ಜಗಳವನ್ನು ನಿಲ್ಲಿಸಿದ್ದಾರೆ. ಪೊಲೀಸರ ಮೇಲೆ ಕೈ ಮಾಡಿದ ಮಹಿಳೆ ಮತ್ತು ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ಮೇಲೆ ವಿವಿಧ ಸೆಕ್ಷನ್​ಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಆನ್​ಲೈನ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿದ ಕಾಮುಕ! ಮೂರು ವರ್ಷವಾದರೂ ನಿಲ್ಲದ ಹುಚ್ಚು

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಕರೊನಾಕ್ಕೆ ಬಲಿಯಾದ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts