More

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಮುಂಬೈ: ದೇಶದ ಬಗ್ಗೆ ಅಪಾರ ಪ್ರೀತಿ ಇರುವ, ದೇಶದ ಬಹಳಷ್ಟು ಮಂದಿಯಿಂದ ಗೌರವಿಸಲ್ಪಡುವ ಖ್ಯಾತ ಉದ್ಯಮಿ ರತನ್​ ಟಾಟಾ ಒಮ್ಮೆ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಂತಾಗಿತ್ತು. ಏಕೆಂದರೆ ಅವರು ತಪ್ಪೇ ಮಾಡದಿದ್ದರೂ ಮುಂಬೈ ಪೊಲೀಸರು ಅವರಿಗೆ ತಪ್ಪು ಮಾಡಿದ್ದಾಗಿ ನೋಟಿಸ್​ ಕಳುಹಿಸಿದ್ದರು.

    ಟಾಟಾ ಕಚೇರಿಗೆ ಅಂಥದ್ದೊಂದು ನೋಟಿಸ್​ ಬರುತ್ತಿದ್ದಂತೆ, ಅದನ್ನು ಪರಿಶೀಲಿಸಿದ ಕಚೇರಿ ಸಿಬ್ಬಂದಿ ಪ್ರಕರಣವನ್ನು ಅಲ್ಲಗಳೆದಿದ್ದರು. ಆ ದಿನದಂದು ಆ ಪ್ರದೇಶಕ್ಕೆ ಟಾಟಾ ಅವರು ಹೋಗೇ ಇರಲಿಲ್ಲ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ್ದರು. ಆಗ ನಿಜವಾಗಿಯೂ ಗೊಂದಲ ಉಂಟಾಗಿದ್ದು ಪೊಲೀಸರಿಗೆ. ಏಕೆಂದರೆ ಎಲ್ಲ ಸರಿ ಇದ್ದರೂ ಏನೋ ಎಡವಟ್ಟಾಗಿದೆ ಎಂಬುದು ಆಗ ಪೊಲೀಸರಿಗೆ ಮನದಟ್ಟಾಗಿದೆ. ಆಗಿದ್ದೇನೆಂದರೆ ರತನ್​ ಟಾಟಾ ಅವರ ಎಂಎಚ್ 01 ಡಿಕೆ 0111 ನಂಬರ್ ಹೊಂದಿರುವ ಕಾರು ಸಂಚಾರ ನಿಯಮ ಉಲ್ಲಂಘಿಸಿದ್ದಾಗಿ ಮುಂಬೈ ಸಂಚಾರ ಪೊಲೀಸರು ಟಾಟಾ ಕಚೇರಿಗೆ ನೋಟಿಸ್​ ಕಳಿಸಿದ್ದರು. ಆಗ ಕಾರ್ ನಂಬರನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಕಚೇರಿ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಇದ್ದಲ್ಲೇ ಹಾರೈಸಿ … ಅಭಿಮಾನಿಗಳಿಗೆ ‘ರಾಕಿಂಗ್​ ಸ್ಟಾರ್’ ಮನವಿ

    ಆ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಟಾಟಾ ಅವರ ಕಾರು ಸಂಚಾರ ನಿಯಮ ಉಲ್ಲಂಘಿಸಿತ್ತು ಎನ್ನಲಾದ ಪ್ರದೇಶದಲ್ಲೇ ಅದೇ ನಂಬರ್​ನ ಬೇರೆ ಕಾರು ಪತ್ತೆಯಾಗಿತ್ತು. ಮುಂಬೈನ ಮಾತುಂಗದ ಫೈವ್ ಗಾರ್ಡನ್ಸ್​ ಪ್ರದೇಶದಿಂದ ಆ ಕಾರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದಾಗ ಪ್ರಕರಣದ ಹಿಂದೆ ಮಹಿಳೆಯೊಬ್ಬಳು ಇರುವುದು ಗಮನಕ್ಕೆ ಬಂದಿತ್ತು. ಮಹಿಳೆಯೊಬ್ಬರು ಆ ಕಾರಿಗೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!
    ವಶ ಪಡಿಸಿಕೊಂಡಿರುವ ಕಾರು

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

    ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts