More

    ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

    ಬೆಂಗಳೂರು: ಇನ್ಶೂರೆನ್ಸ್​ ಪಾಲಿಸಿ ಮಾಡಿಸೋ ಮುನ್ನ ಹುಷಾರು. ದೊಡ್ಡ ಕಂಪನಿಯ ಹೆಸರು ಹೇಳಿಕೊಂಡು ಏಜೆಂಟ್ಸ್​ ಬಂದಿದ್ದರೂ ಒಮ್ಮೆ ಮುನ್ನೆಚ್ಚರಿಕೆ ವಹಿಸಿ, ಸರಿಯಾಗಿ ಯೋಚಿಸಿಯೇ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಿ. ಏಕೆಂದರೆ ದೊಡ್ಡ ದೊಡ್ಡ ಕಂಪನಿಗಳ ಹೆಸರಲ್ಲೇ ಮೋಸ ಮಾಡಿ ನಕಲಿ ಪಾಲಿಸಿ ಮಾಡಿಕೊಡುತ್ತಿರುವ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ.

    ರಿಲಯನ್ಸ್ ಜನರಲ್ ಇನ್ಶೂರೆನ್ಸ್, ಕೋಟಕ್ ಜನರಲ್ ಇನ್ಶೂರೆನ್ಸ್, ಎಚ್​ಡಿಎಫ್​ಸಿ ಇಆರ್​ಜಿಒ ಜನರಲ್ ಇನ್ಶೂರೆನ್ಸ್, ಐಎಫ್​ಎಫ್​ಸಿಒ-ಟಿಒಕೆಐಪಿ ಜನರಲ್ ಇನ್ಶೂರೆನ್ಸ್, ಚೋಳ ಎಂಎಸ್​ ಜನರಲ್ ಇನ್ಶೂರೆನ್ಸ್, ಫ್ಯೂಚರ್ ಜನರಲ್ ಇನ್ಶೂರೆನ್ಸ್​ ಎಂಬ ವಿಮಾ ಕಂಪನಿಗಳ ಹೆಸರು ಕೇಳುತ್ತಿದ್ದಂತೆ, ಒಳ್ಳೆಯ ಕಂಪನಿಗಳು, ಪಾಲಿಸಿ ಮಾಡಿಸಿಬಿಡೋಣ ಎಂದನಿಸುವುದು ಸಹಜ. ಆದರೆ ಈ ಕಿಡಿಗೇಡಿಗಳು ಇಂಥ ಹಲವು ಕಂಪನಿಗಳ ಹೆಸರನ್ನೇ ಬಳಸಿಕೊಂಡು ನಕಲಿ ಪಾಲಿಸಿ ಮಾಡಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: 7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ! 

    ಇಂಥದ್ದೊಂದು ಫೇಕ್ ಇನ್ಶೂರೆನ್ಸ್ ಪಾಲಿಸಿ ತಯಾರಿಸುವ ಜಾಲದ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆ ಸಂಬಂಧ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಮೇಶ್, ಸಾಯಿರಾಮ್, ಗೋವರ್ಧನ್, ರಾಜು, ಪ್ರವೀಣ್, ಕೃಷ್ಣ ಸೇರಿ 11 ಜನರನ್ನು ಬಂಧಿಸಲಾಗಿದೆ. ಬಂಧಿತ ಕೃಷ್ಣನ ವಿರುದ್ಧ ಕರ್ನಾಟಕದಲ್ಲೂ ಕೆಲವು ಕೇಸ್​ಗಳು ದಾಖಲಾಗಿವೆ. ಈತನ ವಿರುದ್ಧ 2016ರಲ್ಲಿ ಬೀದರ್ ಜಿಲ್ಲೆಯ ಬಗ್ದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇದೇ ಮಾದರಿಯ ಫೇಕ್ ಇನ್ಶೂರೆನ್ಸ್​ ಪ್ರಕರಣದಲ್ಲಿ ಭಾಗಿಯಾದ್ದರಿಂದ 2020ರಲ್ಲೂ ಕೇಸ್​ ದಾಖಲಾಗಿದ್ದು, 2020ರ ಡಿಸೆಂಬರ್ 10ರಂದು ಬೀದರ್ನ ಬಗ್ದಲ್ ಪೊಲೀಸರಿಂದ ಬಂಧಿತನಾಗಿದ್ದ. ಆದರೆ ಡಿಸೆಂಬರ್ 21ಕ್ಕೆ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಕರ್ನಾಟಕ ಬಿಟ್ಟು ಆಂಧ್ರಪ್ರದೇಶದಲ್ಲಿ ಕುಕೃತ್ಯ ಶುರುವಿಟ್ಟುಕೊಂಡಿದ್ದ.

    ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!
    ಆರೋಪಿಗಳು ಬಳಸುತ್ತಿದ್ದ ವಾಹನಗಳು

    ಮೋಸ ಹೇಗೆ?: ಹೈವೇ ಹಾಗೂ ಆರ್​ಟಿಒ ಕಚೇರಿಗಳ ಬಳಿ ಠಿಕಾಣಿ ಹೂಡುವ ಆರೋಪಿಗಳು ಅಲ್ಲಿ ವಾಹನಗಳ ಮಾಲಿನ್ಯ ಪರೀಕ್ಷೆ ಮಾಡುವ ಸೋಗಿನಲ್ಲಿ ತಮ್ಮ ಬಲೆ ಬೀಸುತ್ತಿದ್ದರು. ವಾಹನದ ಮಾಲಿನ್ಯ ಪರೀಕ್ಷೆ ಮಾಡುತ್ತ ವಾಹನಗಳ ಇನ್ಶೂರೆನ್ಸ್ ಬಗ್ಗೆ ವಿಚಾರಿಸುತ್ತಿದ್ದರು. ಆರ್​ಟಿಒ ಏಜೆಂಟರುಗಳಿಗೆ ಕಮಿಷನ್ ಆಸೆ ತೋರಿಸಿ ನಕಲಿ ಇನ್ಶೂರೆನ್ಸ್ ಮಾಡಿಸಿಕೊಡುತ್ತಿದ್ದರು ಎನ್ನಲಾಗಿದೆ.

    5ರಿಂದ 10 ಸಾವಿರ ರೂಪಾಯಿಗಳಲ್ಲಿ ವಾಹನಗಳ ಇನ್ಶೂರೆನ್ಸ್ ಮಾಡಿಸಿಕೊಡುತ್ತಿದ್ದರು. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ 1,125 ನಕಲಿ ಪಾಲಿಸಿ ದಾಖಲೆಗಳು, ಕಂಪ್ಯೂಟರ್​ಗಳು, ಲ್ಯಾಪ್​ಟಾಪ್​ಗಳು, ಸ್ಟ್ಯಾಂಪ್​, ಸ್ಕ್ಯಾನರ್​ಗಳನ್ನು ಸೈಬರಾಬಾದ್​ ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ ಅಲ್ಲಿನ ಕಮಿಷನರ್ ವಿ.ಸಿ. ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ವಿಧವೆ ಮನೆಗೆ ನುಗ್ಗಿ ಇಬ್ಬರು ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಸಹೋದರಿಯರ ಮೇಲೆ ಅಟ್ಟಹಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts